ಬೆಂಗಳೂರು : ಮಕ್ಕಳಿಗೆ ಜ್ಞಾನ ವಿಕಾಸ, ಮನೋವಿಜ್ಞಾನ ಬೆಳೆಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸಬೇಕು. ಅವರ ಬಗ್ಗೆ ಸ್ಪೂರ್ತಿ ಬೆಳೆಸುವ ಕೆಲಸ ಆಗಬೇಕು. ಅದೆಲ್ಲಾ ಬಿಟ್ಟು ಹೆಗ್ಡೆವಾರ್ ಭಾಷಣ ಯಾರಿಗಾಗಿ ಸೇರ್ಪಡೆ ಮಾಡಿದ್ದು? ಸರ್ಕಾರ ಮೊಂಡಾಟ ಮಾಡಿದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಸರ್ಕಾರದ ವಿರುದ್ಧ ಮಾತನಾಡಿದ ಸಿದ್ದರಾಮಯ್ಯ, ಅಂಬೇಡ್ಕರ್ ಬಗ್ಗೆ ಸಂವಿಧಾನ ಶಿಲ್ಪಿ ಎಂಬ ಸಾಲನ್ನೇ ತೆಗೆದಿದ್ದಾರೆ. ನನ್ನ ಪ್ರಕಾರ ಪರಿಷ್ಕರಣೆ ಮಾಡಿರುವುದನ್ನು ಕೈ ಬಿಟ್ಟು, ಹಳೆಯದ್ದನೇ ಮುಂದುವರಿಸಬೇಕು. ಅಗತ್ಯವಿದ್ದರೆ ಹೊಸ ಕಮಿಟಿ ಮಾಡಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.