ನಿಮಗಿದು ಗೊತ್ತಾ ಸಿದ್ದರಾಮಯ್ಯನವರು ಸಿನಿಮಾಗಳಲ್ಲಿ ನಟಿಸಿದ್ದಾರೆ…! ಆಶ್ಚರ್ಯನಾ? ನಿಜ…! ಆದರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿನಿಮಾದಲ್ಲಿ ಅಭಿನಯಿಸಿದ್ದಲ್ಲ. ಬದಲಾಗಿ ಜೂನಿಯರ್ ಸಿದ್ದರಾಮಯ್ಯ…!
ಕಳೆದ ಒಂದು ವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡ್ಯಾನ್ಸ್ ಮಾಡಿದ್ದಾರೆ ಎಂಬ ವೀಡಿಯೋವೊಂದು ವೈರಲ್ ಆಗಿತ್ತು. ಸಿಎಂ ವಿರುದ್ಧ ಟ್ರೋಲ್ ಗಳೂ ಆಗಿದ್ದವು. ಆದರೆ ಅದು ಸಿದ್ದರಾಮಯ್ಯ ಅವರಲ್ಲ ಅವರಂತೇ ಕಾಣುವ ಚನ್ನಮಾಯಿ ಗೌಡ ಎಂದು ತಡವಾಗಿ ಗೊತ್ತಾಗಿತ್ತು. ಕೆಲವರು ಇಂದಿಗೂ ಅಲ್ಲಿ ಡ್ಯಾನ್ಸ್ ಮಾಡಿರೋದು ಸಿದ್ದರಾಮಯ್ಯ ಅವರೇ ಎಂದು ಭಾವಿಸಿದ್ದಾರೆ.
ಅದು ಜೂನಿಯರ್ ಸಿದ್ದರಾಮಯ್ಯ ಚನ್ನಮಾಯಿಗೌಡ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಾಕನಹಳ್ಳಿ ನಿವಾಸಿ ಅವರಾದ ಚನ್ನಮಾಯಿ ಗೌಡ ಅವರು, ವೀರಾಪುರದ ವೀರಮಾಸ್ತಿ, ಅರ್ಧ ತಿಕ್ಲು ಪುಕ್ಲು, ಕರಾಳ ರಾತ್ರಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.