ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗಬಾರದು ಎಂದು ಎಲ್ಲರೂ ಒಂದಾಗಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲಾ ಜಾತಿಯ ಬಡವರಿಗೆ ಸಹಾಯ ಮಾಡಿರುವೆ. ಆದ್ದರಿಂದ ನನ್ನ ಮೇಲೆ ಜನರ ಆಶೀರ್ವಾದವಿದ್ದು, ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದರು.
ರಾಜಕೀಯ ಹಣ ಮತ್ತು ಜಾತಿಯ ಮೇಲೆ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಉತ್ತಮ ಕೆಲಸ ಮಾಡುವವರನ್ನು ಗೆಲ್ಲಿಸಬೇಕು. ಹಾಲು , ಅಕ್ಕಿ, ಪಶು , ಶೂ ಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ನೀಡಿದ್ದೇನೆ. ರಾಜಕೀಯದಲ್ಲಿ ಹೆದರಿ ಹಿಂದೆ ಸರಿಯುವ ಪ್ರಮೆಯವೇ ಇಲ್ಲ. ಮುಂದೆ ಸಹ ಹೋರಾಟ ಮಾಡುತ್ತೇನೆ ಎಂದ ಅವರು ಮತ್ತೆ ಸಿಎಂ ಆಗುವ ವಿಶ್ವಾಸ ವ್ಯಕ್ತಪಡಿಸಿದರು.