ವಿಪಕ್ಷನಾಯಕ ಸಿದ್ದರಾಮಯ್ಯವರಿಗೆ ಬಿಜೆಪಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ ವಾಗ್ದಾಳಿ ಮಾಡಿದ್ದಾರೆ. ಹೊನ್ನಾವರ ಪರೇಶ್ ಮೇಸ್ತ ಸಾವು ಹತ್ಯೆ ಅಲ್ಲ ಆಕಸ್ಮಿಕ ಸಾವು ಎಂದು ಸಿಬಿಐ ತನಿಖಾ ವರದಿಯಲ್ಲಿ ಉಲ್ಲೇಖ ಬಹಿರಂಗೊಂಡ ಬೆನ್ನಲ್ಲೆ ವಿಪಕ್ಷನಾಯಕ ಸಿದ್ದರಾಮಯ್ಯ ಬಿಜೆಪಿ ಕ್ಷಮೆ ಕೇಳಬೇಕು ಎಂದು ಟ್ವೀಟ್ ಮಾಡಿದ್ದರು. ಈ ಸಂಬಂಧ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಎಂಎಲ್ಸಿ ರವಿಕುಮಾರ ಹುಬ್ಬಳ್ಳಿಯಲ್ಲಿ ಯೋಗೇಶ್ ಕೊಲೆಯಾದಾಗ ಏನಾಯ್ತು? ರಾಜ್ಯದಲ್ಲಿ ಆಗಿರೋ ಕೊಲೆಗಳಿಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು. ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದಿದ್ದು ಕೊಲೆಗೆ ಕಾರಣ. ಕಾಂಗ್ರೆಸ್ ಭಂಡ ಧೈರ್ಯದಿಂದ PFI ಸಂಘಟನೆ ಬೆಂಬಲಿಸಿತ್ತು. ಪರೇಶ್ ಮೇಸ್ತಾ ಸಾವು ಕೊಲೆ. ಇದರಲ್ಲಿ ಎರಡು ಮಾತು ಇಲ್ಲ. ಇದಕ್ಕೆ ಪಿಎಫ್ಐ ಸಂಘಟನೆ ಯವರೇ ಕಾರಣ ಅಂತಾ ಅವರ ತಂದೆಯೇ ಹೇಳಿದ್ದಾರೆ. ಸಿಬಿಐ ವರದಿ ಕೋರ್ಟ್ಗೆ ಕೊಟ್ಟಿದ್ದಾರೆ. ಕೋರ್ಟ್ನಿಂದ ಸಂಪೂರ್ಣ ತನಿಖಾ ವರದಿ ಬರಲಿ. ನಮ್ಮನ್ನು ಕೇಳುವ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಇನ್ನೂ ಮೊದಲ ದಿನದ ಭಾರತ್ ಜೋಡೋ ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರನ್ನು ಹೈಜಾಕ್ ಮಾಡಿದರು. ಆಮೇಲೆ ಪಾದಯಾತ್ರೆಗೆ ಜನರೇ ಬರಲಿಲ್ಲ. ಇದರಿಂದ ಅವರ ಬುಡ ಅಲುಗಾಡುತ್ತಿದೆ. ನಮಗೆ ಯಾವುದೇ ನಡುಕ ಇಲ್ಲ, ಅವರು ನಡುಗುತ್ತಿದ್ದಾರೆ ಎಂದು ಹೇಳಿದ್ದಾರೆ.