No menu items!
8 C
Munich
Wednesday, April 15, 2026

ಪುನೀತ್ ರಾಜ್​ ಕುಮಾರ್ ಈ ಫೋಟೊ ಈಗ ಸಖತ್ ವೈರಲ್

Must read

ಕರ್ನಾಟಕ ರತ್ನ ಪುನೀತ್ ರಾಜ್​ ಕುಮಾರ್ ಅವರು ಕೊನೆಯಬಾರಿ ಆಯುಧ ಪೂಜೆ ಆಚರಿಸಿದ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್  ವೈರಲ್ ಆಗಿದೆ. ಕಳೆದ ವರ್ಷ ತಮ್ಮ ಮಡದಿ ಜೊತೆ ಸೇರಿ ಬೆಂಗಳೂರಿನ ತಮ್ಮ ವಜ್ರೇಶ್ವರಿ ಕಛೇರಿಯಲ್ಲಿ ಆಯುಧ ಪೂಜೆ ಮಾಡಿ ಸಂಭ್ರಮಿಸದ್ದರು . ಇದೀಗ ಈ ಫೋಟೋ ವೈರಲ್ ಆಗಿದ್ದು, ಅಪ್ಪು ಫ್ಯಾನ್ಸ್ ಭಾವುಕರಾಗಿದ್ದಾರೆ. ಮಡದಿ ಅಶ್ವಿನಿ ಜೊತೆಗೂಡಿ ವಿಜಯ ದಶಮಿ ಆಚರಿಸಿದ್ದ ಅಪ್ಪು ಆಯುಧ ಪೂಜೆ ದಿನ ಚೆಕ್ಸ್ ಶರ್ಟ್ ಧರಿಸಿ ಸಿಬ್ಬಂದಿ  ಜೊತೆಗೆ ನಿಂತು ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದರು. ಆಯುಧ ಪೂಜೆ ನಂತರ ಸಿಬ್ಬಂದಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದ ಅಪ್ಪು ಅವರ ಹಳೆಯ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಫೋಟೋಗಳನ್ನು ಈಗ ಅವರ ಅಭಿಮಾನಿಗಳು ವಾಟ್ಸಾಪ್ ಹಾಗೂ ಇತರ ಸೋಷಿಯಲ್ ಮೀಡಿಯಾ ಫ್ಲಾರ್ಟ್​ಫಾರ್ಮ್​ನಲ್ಲಿ ಶೇರ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅಪ್ಪು ಅಭಿಮಾನಿಗಳು ಈ ಬಾರಿಯಬ ಪುನೀತಣ್ಣ ಇಲ್ಲ ಎನ್ನುವ ನೋವಿನಲ್ಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article