ಶ್ರೀಗಳು ಆರೋಗ್ಯವಾಗಿದ್ದಾರೆ ವೈದ್ಯರ ಸ್ಪಷ್ಟನೆ..
ನಿನ್ನೆ ಸಂಜೆ ಹೃದಯ ಬಡಿತದ ಏರುಪೇರು ಹಾಗೆ ಜ್ವರದಿಂದ ಬಳಲುತ್ತಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.. ಡಾ.ರವಿಂದ್ರ ಮತ್ತು ತಂಡ ಮಠಕ್ಕೆ ತೆರಳಿ ಅಲ್ಲಿಯೇ ಚಿಕಿತ್ಸೆ ನೀಡಿದ್ದಾರೆ.. ಇನ್ನು ಸ್ಟಂಟ್ ಅಳವಡಿಕೆಯ ಬಗ್ಗೆ ಮತ್ತಷ್ಟು ತಜ್ಞರ ಜೊತೆಗೆ ಚರ್ಚೆ ಸಹ ನಡೆಸಲಾಗುವುದು ಅಂತ ತಿಳಿಸಿದ್ದಾರೆ.. ಈಗಾಗಲೇ ಶ್ರೀಗಳಿಗೆ 11 ಸ್ಟೆಂಟ್ ಗಳನ್ನ ಅಳವಡಿಸಲಾಗಿದ್ದು, ಆ ಸ್ಟಂಟ್ಗಳನ್ನು ತೆಗೆಯುವುದು ಬಹಳ ಕಷ್ಟ. ಈ ಹಿನ್ನೆಲೆಯಲ್ಲಿ ಅದಕ್ಕೆ ನುರಿತ ವೈದ್ಯರ ಸಲಹೆ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ