ಸಿದ್ಧಿದಾತ್ರಿಯಿಂದ ಸರ್ವವೂ ಸಿದ್ಧಿ

Date:

ಶಾರದೀಯ ನವರಾತ್ರಿಯ 9 ನೇ ದಿನ ಸಿದ್ಧಿದಾತ್ರಿಯನ್ನ ಪೂಜಿಸುತ್ತಾರೆ ‌ . ಅವಳು ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಿದ್ಧಿಗಳನ್ನು ನೀಡುತ್ತಾಳೆ. ಆದ್ದರಿಂದ ಅವಳನ್ನು ಸಿದ್ಧಿದಾತ್ರಿ ದೇವಿ ಎಂದು ಕರೆಯಲಾಗುತ್ತದೆ. ಸಿದ್ಧಿದಾತ್ರಿಯ ಇನ್ನೊಂದು ಹೆಸರು ಲಕ್ಷ್ಮಿ ದೇವಿ, ಅವಳು ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ಪ್ರತಿನಿಧಿಸುತ್ತಾಳೆ.

ಮಾತೃದೇವತೆಯ ಈ ರೂಪವು ಬಲಗೈಯಲ್ಲಿ ಚಕ್ರವನ್ನು ಮತ್ತು ಗದೆಯನ್ನು ಹಾಗೂ ಎಡಗೈಯಲ್ಲಿ ಶಂಖವನ್ನು ಮತ್ತು ಕಮಲವನ್ನು ಹಿಡಿದುಕೊಂಡಿದ್ದಾಳೆ. ಸಂಪೂರ್ಣವಾಗಿ ಅರಳಿದ ಕಮಲದ ಮೇಲೆ ಕುಳಿತಿರುವ, ಮಾತೃ ದೇವಿಯ ಈ ಅವತಾರವನ್ನು ನಿರಾಕಾರ ಆದಿಶಕ್ತಿ ಎಂದು ಶ್ಲಾಘಿಸಲಾಗುತ್ತದೆ, ಈಕೆಯನ್ನು ಶಿವನು ಸಹ ಪೂಜಿಸುತ್ತಾನೆ.
ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿರುವರು. ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಅವರು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುವರು. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಪರಿಶೋಧನೆ ಸಿಗುವುದು. ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನು ಸಿದ್ಧಿಧಾತ್ರಿ ದೇವಿಯು ನಿವಾರಿಸುವರು.

ಸ್ತುತಿ
ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ದೇವಿಯ ಧಾನ್ಯ
ವಂದೇ ವಂಚಿತ ಮನೋರಥಾರ್ಥ ಚಂದ್ರಧಕ್ರತ್ವಶೇಖರಂ

ಕಮಲಸ್ತಿತ್ ಚತುರ್ಭುಜಾ ಸಿದ್ದಿದಾತ್ರಿ ಯಾಶಸ್ವಿನೀಂ

ಸ್ವರ್ಣವರ್ಣ ನಿರ್ವಾಚಕ್ರ ಸ್ತರಂ ನವಂ ದುರ್ಗಾ ತ್ರಿನೇತ್ರಂ

ಶಂಖ, ಚಕ್ರ, ಗಧ, ಪದ್ಮಧರಂ ಸಿದ್ದಿದಾತ್ರಿ ಭಜೆಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕರಾ ಭೂಷಿತಂ

ಮಂಜೀರಾ, ಹರಾ, ಕೀರುರಾ, ಕಿಂಕಿನಿ, ರತ್ನಾಕುಂಡಲ ಮಂಡಿತಂ

ಪ್ರಫುಲ್ಲಾ ವಂದನಾ ಪಲ್ಲವಧರಂ ಕಾಂತಾ ಕಪೋಲಮ್ ಪಿನ್ ಪಯೋಧರಂ

ಕಾಮನಿಯಮ್ ಲವಣಂ ಶ್ರೀನಾಕತಿ ನಿಮ್ನಾನಾಭಿ ನಿತಂಬನಿಂ


ಭಕ್ತರು ಸಿದ್ಧಿದಾತ್ರಿ ದೇವಿಗೆ ತೆಂಗಿನಕಾಯಿ, ಖೀರ್ ಮತ್ತು ಪಂಚಾಮೃತವನ್ನು ಅರ್ಪಿಸುತ್ತಾರೆ. ಸಿದ್ಧಿದಾತ್ರಿಗೆ ಇಷ್ಟವಾದ ಹೂವು ಸಂಪಿಗೆ ಹೂವು. ಇದರಿಂದಾಗಿ ಈ ದಿನ ಸಂಪಿಗೆ ಹೂವು ಇಟ್ಟು ಪೂಜೆ ಮಾಡಲಾಗುತ್ತದೆ.

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...