ಎರಡು ದಿನಗಳ ಕಾಲ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಮೈಸೂರಿನಲ್ಲಿರುವ ಸಿದ್ದರಾಮಯ್ಯ ನಿವಾಸದತ್ತ ಟಿಕೆಟ್ ಆಕಾಂಕ್ಷಿಗಳು ದೌಡಾಯಿಸಿ ಸುದೀರ್ಘ ಚರ್ಚೆ ನಡೆಸಿದಾರೆ. ಗುಂಡ್ಲುಪೇಟೆ ಟಿಕೆಟ್ ಆಕಾಂಕ್ಷಿ ಹೆಚ್ ಎಂ ಗಣೇಶ್ ಪ್ರಸಾದ್, ಕೆ ಆರ್ ಕ್ಷೇತ್ರದ ಆಕಾಂಕ್ಷಿ ಪ್ರದೀಪ್ ಕುಮಾರ್, ಕೆ ಆರ್ ನಗರ ಕ್ಷೇತ್ರದ ಆಕಾಂಕ್ಷಿ ಡಿ ರವಿಶಂಕರ್, ಚಾಮರಾಜ ಕ್ಷೇತ್ರದ ಆಕಾಂಕ್ಷಿ ಹರೀಶ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ ಮರಿಗೌಡ ಆಗಮಿಸಿ, ಮುಂದಿನ ಚುನಾವಣೆ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದಾರೆ.