ಕಾಂಗ್ರೆಸ್ನ ಬಸ್ ಯಾತ್ರೆಗೆ ಇನ್ನೂ ದಿನಾಂಕ‌ ನಿಗದಿಯಾಗಿಲ್ಲ

Must read

ರಾಜ್ಯಾದ್ಯಂತ ನಡೆಯಲಿರುವ ಕಾಂಗ್ರೆಸ್ನ ಬಸ್ ಯಾತ್ರೆಗೆ ಇನ್ನೂ ದಿನಾಂಕ‌ ನಿಗದಿಯಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು, ಯಾತ್ರೆ ಬಸ್ ಸಿದ್ಧವಾಗುತ್ತಿದೆ. ಸದ್ಯ ಕೋಲಾರದಲ್ಲಿ ಬಸ್ ಟೆಸ್ಟ್ ರನ್ ಆಗಿದ್ದು, ನಾನೊಂದು ಟೀಂ, ಡಿ.ಕೆ.ಶಿವಕುಮಾರ್ ಒಂದು ಟೀಂ ಆಗಿ ಪ್ರಚಾರ ಮಾಡ್ತೇವೆ. ಬಸ್ ಯಾತ್ರೆ ಆರಂಭಕ್ಕೆ ನಾವೇನು ಜೋತಿಷ್ಯ ನೋಡುವುದಿಲ್ಲ. ನಮಗೆ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ ಯಾವುದೂ ಇಲ್ಲ. ಎಲ್ಲಾ ಸಮಯವು ಕೂಡ ಒಳ್ಳೆಯ ಕಾಲವೇ ಆಗಿದ್ದು, ಶೂನ್ಯ ಮಾಸದಲ್ಲಿ ಹುಟ್ಟಿದ ಮಕ್ಕಳೆಲ್ಲಾ ಏನ್ ಸತ್ತು ಹೋಗ್ತಾರಾ. ಇನ್ನ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ರು.

- Advertisement -spot_img

More articles

- Advertisement -spot_img

Latest article