ಸೈಲೆಂಟ್ ಸುನಿಲ್ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು ?

0
138

ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ, ಸರ್ಚ್ ವಾರೆಂಟ್ನಲ್ಲಿರೋ ರೌಡಿ. ಅಂತಹವನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಳ್ಳುವುದು ಸರಿನಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಬಗ್ಗೆ KR ಪೇಟೆಯ ಹೆಲಿಪ್ಯಾಡ್ನಲ್ಲಿ ಮಾತ್ನಾಡಿದ ಅವರು, ಸರ್ಚ್ ವಾರೆಂಟ್ನಲ್ಲಿರುವ ರೌಡಿ ಸೈಲೆಂಟ್ ಸುನಿಲ್ ಜೊತೆಗೆ ಇಬ್ಬರು ಎಂಪಿ, BJP ನಾಯಕರು ವೇದಿಕೆ ಹಂಚಿಕೊಂಡಿದ್ದಾರೆ. ಗೊತ್ತಿದ್ದು ಗೊತ್ತಿದ್ದು ರೌಡಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಬೇರೆ. ಅದನ್ನ ಕೇಳಿದ್ರೆ ಕಾಂಗ್ರೆಸ್ನಲ್ಲೂ ಇದ್ದಾರೆ ನೋಡಿ ಅನ್ನೋದು ಎಷ್ಟು ಸರಿ. ಬಿಜೆಪಿಯವರಿಗೆ ಅಂಟು ರೋಗ ಅಂಟಿದೆ. ಅದರಲ್ಲೂ ಸಿಎಂ ಬೊಮ್ಮಾಯಿಗೆ ಆ ರೋಗ ಜಾಸ್ತಿ. ಹಿಂದಿನ ಅಧಿಕಾರದಲ್ಲಿ.. ಕಾಂಗ್ರೆಸ್ಸಿನಲ್ಲಿ.. ಹೀಗೆ ಎಲ್ಲದಕ್ಕೂ ಬೊಟ್ಟು ಮಾಡ್ತಾರೆ. ಮೊದಲು ನಿಮ್ಮ ತಪ್ಪುಗಳನ್ನ ಹೇಳ್ರಯ್ಯ.. ನೀವೇನು ಮಾಡಿದ್ರಿ ಅಂತ ಹೇಳಿ. ಹೆಸರಲ್ಲೇ ಫೈಟರ್ ರವಿ ಬಗ್ಗೆ ಗೊತ್ತಾಗ್ತಿದೆ. ಅಶಾಂತಿ ನಿರ್ಮಾಣ ಮಾಡಲು BJPಯವರಿಗೆ ಇಂತಹವರು ಬೇಕಲ್ಲ. ಇನ್ನ ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದವರು ಎಂಬ ಆರೋಪ ವಿಚಾರ, ಅಮಿತ್ ಶಾ ಎಲ್ಲೋಗಿದ್ರು. ಏನು ಮಾವನ ಮನೆಗೆ ಹೋಗಿದ್ರಾ. ಅಮಿತ್ ಶಾಗೆ 3 ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅವರೇ ಹೋಂ ಮಿನಿಸ್ಟರ್ ಆಗಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಆಗಿರಲಿಲ್ವಾ. ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಆಗಿತ್ತಷ್ಟೇ. ನಲಪಾಡ್ ರೌಡಿ ಅಲ್ಲ, ರೌಡಿ ಶೀಟರ್ ಕೂಡ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here