ತಂದೆ, ತಾಯಿ, ಫ್ಯಾಮಿಲಿ ಇಲ್ಲ ಅಂದ್ರೆ ಜೀವನ ಬರೀ ನೋವಿನ ಸಂತೆ, ಪ್ರತಿ ಕ್ಷಣ ಕಾಡೋ ಹಾಗಿದೆ ಚಿಂತೆ….. ಆದ್ರೆ ಇದ್ಯಾವುದೇ ವ್ಯಥೆ ಅವನಿಗೆ ಇರಲಿಲ್ಲ ಅಂತ ಕಾಣುತ್ತೆ ಅಥವಾ ಅವನ ಮುಖದಲ್ಲಿ ಅದು ಕಾಣುತ್ತಿರಲಿಲ್ಲವೇನೋ…. ಅವನ ಹೆಸರು ’13’ !. ಅರೆ ಹೆಸರು ನಂಬರ್ ತರ ಇದೆ ಅಂತ ಯೋಚಿಸ್ತಿದ್ದೀರಾ? ಹಾ! ಅದು ಅವ ಕೆಲಸ ಮಾಡೋ ಗ್ಯಾರೇಜ್ ಇರುವ ಏರಿಯಾದ ನಂಬರ್. ಅವನಂತ ಅನಾಥರಿಗೆ ಯಾರು ಹೆಸರು ಇಡ್ತಾರೆ ಅಲ್ವಾ?. ಈ 13 ಗೆ ತಂದೆ ತಾಯಿ ಫ್ಯಾಮಿಲಿ ಅಂತ ಹೇಳ್ಕೊಳೋಕೆ ಯಾರೂ ಇಲ್ಲ. ಬುದ್ದಿ ಬಂದಾಗಿನಿಂದ ಗ್ಯಾರೇಜ್ ಕನಸು ಎಲ್ಲರಿಗೂ ಇರುತ್ತೆ ಅಲ್ಲಾ! . ಮಿಂಚು ಹುಳಕ್ಕೆ ಬಾನಿನ ಚುಕ್ಕಿ ಆಗಿ ಹೊಳೆಯೋ ಆಸೆ, ಹಾಗೆ ಈ 13ಗೆ ಕಾಲೇಜ್ ಗೆ ಹೋಗೋ ಆಸೆ. ಅಂತೂ ಹೇಗೋ ಕಾಲೇಜ್ ಸೇರಿಬಿಟ್ಟ. ಆದ್ರೆ ಕಲಿಯೋದ್ರಲ್ಲಿ ತುಂಬಾ ದಡ್ಡ. ಅವನಿಗೆ ಕಲೀಬೇಕು ಅಂತ ಅನ್ನಿಸ್ತಾನೂ ಇರಲಿಲ್ಲ. ಅವನ ಕನಸು ಕಾಲೇಜ್ ಹೋಗೋದು ಆಗಿತ್ತು ಅಷ್ಟೆ. ಅದಕ್ಕಾಗಿ ಅವ ಖುಷಿ ಪಡ್ತಿದ್ದ, ಆದ್ರೆ ಅವನ ನಗು ಆ ಕ್ಲಾಸಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಯಾಕಂದ್ರೆ ಅವನ ಹಳದಿ ಹಲ್ಲು, ಹರಿದ ಕೊಳಕು ಬಟ್ಟೆ, ಕೆದರಿ ಚದುರಿದ ಕೂದಲು… ಆದ್ರೆ ಅವನಿಗದ್ಯಾವುದರ ಅರಿವೂ ಇರುವುದಿಲ್ಲ. ಯಾಕಂದ್ರೆ ಚಂದ ಸಿರಿವಂತರಿಗೆ ಮಾತ್ರ ಅಂತ ನಂಬಿದ್ದ. ಅವನಿಗೆ ಯಾರೂ ಗೆಳೆಯರು ಇರಲಿಲ್ಲ, ಅಂಥವನನ್ನು ಯಾರು ಇಷ್ಟ ಪಡ್ತಾರೆ ಅಲ್ವಾ?. ಆ 13 ಗೆ ಎಲ್ಲಾ ಉಪನ್ಯಾಸಕರು ಬಯ್ಯುತ್ತಿದ್ರು. ಆದ್ರೂ ಅವನು ಚೇಂಜ್ ಆಗ್ಲೇ ಇಲ್ಲ. ಅವನನ್ನು ಉಪನ್ಯಾಸಕರು ಕೊನೆಯ ಬೆಂಚ್ ನಲ್ಲಿ ಬೇರೆ ಕೂರಿಸ್ತಿದ್ರು. ಒಂದು ದಿನ ಆ ಕಾಲೇಜ್ ಗೆ ಒಬ್ಬಳು ಹೊಸ ಹುಡುಗಿ ಸೇರುತ್ತಾಳೆ. ಅವಳ ಹೆಸರು ‘ಸ್ನೇಹ’. ನೋಡೋಕೆ ಕ್ಯೂಟ್, ಅವಳು ಕ್ಲಾಸ್ ಗೆ ಬಂದಾಗ ಎಲ್ಲಾ ಹುಡುಗರು ಕೂಡ ಅವಳನ್ನೇ ನೋಡುತ್ತಾ ಮೈ ಮರೆಯುತ್ತಾರೆ.ಒಬ್ಬನನ್ನು ಬಿಟ್ಟು ಎಲ್ಲಾ ಹುಡುಗರು ಪರಿಚಯ ಮಾಡಿಕೊಳ್ತಾರೆ, ಪುನ: ಆ ಒಬ್ಬನನ್ನು ಬಿಟ್ಟು, ಯಾಕೋ ಅವಳಿಗೆ ಅವನ ಗುಣ ಇಷ್ಟ ಆಗುತ್ತದೆ. ನಂತರ ಅವಳು ಅವನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಾಳೆ ಮತ್ತು ‘I’m Sneha, can you be my friend ? ಅಂತ ಕೇಳಿ ಶೇಕ್ ಹ್ಯಾಂಡ್ ಮಾಡೋಕೆ ಕೈ ಮುಂದೆ ಮಾಡ್ತಾಳೆ. ಅವ ಕೈ ಕೊಟ್ಟಾಗ ಅವಳ ಕೈಗೆ ಗ್ರೀಸ್ ಆಗತ್ತೆ. ಅವಳು ನಗುತ್ತಾ ” It is a symbol of our Friendship” ಅಂತಾಳೆ. ಗೆಳೆತನ ಅಂದ್ರೆ ಹೀಗೇನೇ ಕೆಲವೇ ನಿಮಿಷದಲ್ಲಿ ಪ್ರಾರಂಭವಾಗುತ್ತದೆ. ಅಂತೂ ಸ್ನೇಹ ಮತ್ತು 13 ಗೆಳೆತನ ಪ್ರಾರಂಭವಾಯ್ತು. ಅವಳು ಅವನ ಹೆಸರನ್ನು “ಸಂಪತ್” ಅಂತ ಬದಲಾವಣೆ ಮಾಡ್ತಾಳೆ. ಅವನ ಜೀವನದಲ್ಲಿ ಮೊದಲ ಬಾರಿಗೆ ಆಗುತ್ತಿರುವ ಬದಲಾವಣೆ ಅದು. ಅವಳು ಓದಿನಲ್ಲಿ ಟಾಪರ್.. ಆದ್ರೆ ಸಂಪತ್ ಏನೂ ಇಲ್ಲ. ಸ್ನೇಹ ಸಂಪತ್ ನ ಲೈಫ್ ಬದಲಾವಣೆ ಮಾಡೋಕೆ ಶುರು ಮಾಡ್ತಾಳೆ. ಜೀವನ ಅಂದ್ರೆ ಏನು ಅಂತ ಹೇಳಿಕೊಡ್ತಾಳೆ. ಅವನ ಮುಖದಲ್ಲಿ ನಗು ಮೂಡುತ್ತದೆ. ಸ್ನೇಹ ಮತ್ತು ಸಂಪತ್ ತುಂಬಾ ಹತ್ತಿರವಾಗುತ್ತಾರೆ. ಅವಳು ಅವನ ಜೀವನವನ್ನು ಸಂಪೂರ್ಣ ಬದಲಾಯಿಸಿ ಬಿಡ್ತಾಳೆ. ಈಗ ಅವನು ಎಲ್ಲರೂ ದ್ವೇಷಿಸುವ 13 ಅಲ್ಲ ಬದಲಿಗೆ ಇಷ್ಟ ಪಡುವ ಸಂಪತ್. ತನಗೆ ಜೀವನ ಹೇಳಿಕೊಟ್ಟ ಸ್ನೇಹಾಗೆ ಏನಾದ್ರೂ ಸಹಾಯ ಮಾಡಬೇಕು ಅಂತ ಅಂದುಕೊಳ್ತಿದ್ದ. ಆದ್ರೆ ಅವಳು “these are the part of our Friendship” ಅಂತ ಹೇಳ್ತಿದ್ಲು.ಕೆಲವು ದಿನಗಳ ನಂತರ ಅವರ ಎಕ್ಸಾಂ ಕೂಡ ಆಯ್ತು. ಆಗ. ಸ್ನೇಹ ಸಂಪತ್ ಗೆ ಹೇಳಿದ್ದು “ಈ ಸಲ ನೀನು ಟಾಪರ್ ಆಗ್ಬೇಕು ಕಣೋ, ಇದು ನನ್ನ ಕನಸು..” ನಂತ್ರ ಅವಳು ಅವಳ ಊರಿಗೆ ಹೊರಡ್ತಾಳೆ. ಹೋಗುವಾಗ ಇಬ್ಬರಿಗೂ ತುಂಬಾ ಬೇಸರವಾಗುತ್ತದೆ, ಅವಳು ಹೋದಳು. ಕೆಲದಿನಗಳ ನಂತರ ಸಂಪತ್ ನ್ಯೂಸ್ ಪೇಪರ್ ಓದೋವಾಗ ಒಂದು ಆಕ್ಸಿಡೆಂಟ್ ವಿಷಯ ನೋಡ್ತಾನೆ. ನೋಡಿದ್ರೆ ಅದು ಅವನ ಗೆಳತಿ ಸ್ನೇಹಾಗೆ ಆದ ಅಪಘಾತ. ಜೀವನ ಅಂದ್ರೆ ಹಾಗೇನೇ, ತುಂಬಾ ಇಷ್ಟ ಪಡುವವರನ್ನು ಆದೇವ್ರು ಯಾವಾಗ್ಲೂ ಬೇರೆ ಮಾಡೋಕೆ ಟ್ರೈ ಮಾಡ್ತಾನೆ. ಸಂಪತ್ ಅದನ್ನು ನೋಡಿ ಏನು ಮಾಡ್ಬೇಕು ಅಂತ ತೋಚದೆ ಮಂಕಾಗಿ ಬಿಡ್ತಾನೆ. ನಂತರ ಅವಳನ್ನು ಅಡ್ಮಿಟ್ ಮಾಡಿದ ಆಸ್ಪತ್ರೆಗೆ ಹೋಗಿ ಐ.ಸಿ.ಯು ನಲ್ಲಿ ಮಲಗಿದ್ದ ಅವನ ಜೀವದ ಗೆಳತಿಯನ್ನು ನೋಡ್ತಾನೆ. ತನಗೆ ಜೀವನ ಹೇಳಿಕೊಟ್ಟ ಗೆಳತಿಯ ಜೀವನ ಈಗ ಆ ದೇವರ ಕೈಯಲ್ಲಿ, ನಂತರ ಡಾಕ್ಟರನ್ನು ಭೇಟಿ ಆಗ್ತಾನೆ.ಆಗ ಡಾಕ್ಟರ್ ನಮಗೆ O-ve blood ಹೊಂದಿರುವವರ ಕಣ್ಣು ಮತ್ತು ಕಿಡ್ನಿ ಒಂದು ದಿನದ ಒಳಗೆ ಸಿಕ್ಕಿದ್ರೆ ಆಗಬಹುದು. ಅವಳ 2 ಕಣ್ಣು ಮತ್ತು 2 ಕಿಡ್ನಿ ಫೇಲ್ ಆಗಿದೆ. ಆದ್ರೆ O-ve ಸಿಗೋದು ಡೌಟು. ನಮ್ಮಲ್ಲಿರೋ ಯಾವ ಡೆಡ್ ಬಾಡಿಗೂ ಅವಳಿಗೂ ಮ್ಯಾಚ್ ಆಗ್ತಿಲ್ಲ. I am sorry ಅಂತ ಹೇಳ್ತಾರೆ. ಸಂಪತ್ ಗೆ ಅಳು ಬರುತ್ತೆ. ನಂತ್ರ ಸ್ನೇಹನನ್ನು ನೋಡಿ ಅಲ್ಲಿಂದ ಹೋಗ್ತಾನೆ. ಆ ದಿನ ರಾತ್ರಿ ಆಸ್ಪತ್ರೆಗೆ ಒಂದು ಡೆಡ್ ಬಾಡಿ ಬರುತ್ತೆ. ವಾಹ್! ಎಂಥಾ ಅದೃಷ್ಟ !! ಅದು O-ve.. ಡಾಕ್ಟರ್
ಅವಳ ತಂದೆತಾಯಿಗೆ ಎಲ್ಲರಿಗೂ ಸಂತೋಷವಾಗುತ್ತದೆ. ನಂತರ ಅವಳಿಗೆ ಆ ಬಾಡಿ ಯಿಂದ ಕಣ್ಣು ಮತ್ತು ಕಿಡ್ನಿ ಜೋಡಿಸ್ತಾರೆ. 3 ದಿನಗಳ ನಂತರ ಅವಳಿಗೆ ಪ್ರಜ್ಞೆ ಬರುತ್ತದೆ. ಆಗ ಅವಳಿಗೆ ಡಾಕ್ಟರ್ ಆದ ಆಕ್ಸಿಡೆಂಟ್, ಕಣ್ಣು ಮತ್ತು ಕಿಡ್ನಿ ಜೋಡಿಸಿದ ಬಗ್ಗೆ ಹೇಳ್ತಾರೆ. ಅವಳು ಆಗ್ಲೇ “ಸಂಪತ್ ಬಂದಿಲ್ವಾ” ಅಂತ ಕೇಳ್ತಾಳೆ. ಅದೇ ಸಮಯದಲ್ಲಿ ಅವಳಿಗೆ ತಂದ ಟ್ಯಾಬ್ಲೆಟ್ ಕವರ್ ಗೆ ಕಟ್ಟಿದ್ದ ನ್ಯೂಸ್ ಪೇಪರ್ ತುಂಡಿನಲ್ಲಿ “ಆತ್ಮಹತ್ಯೆ” ನ್ಯೂಸ್ ಓದ್ತಾಳೆ. ನೋಡಿದ್ರೆ ಅದು ಸಂಪತ್. ತನಗೆ ಜೀವನ ಹೇಳಿಕೊಟ್ಟಿದ್ದನ್ನು ಸ್ನೇಹಿತೆ ಸ್ನೇಹಾ ನಿನ್ನ ಜೀವನ ಉಳಿಸೋಕೆ ಸಂಪತ್ ಆತ್ಮಹತ್ಯೆ ಮಾಡಿಕೊಂಡಿದ್ದ. ಅವಳ ಕಣ್ಣಿನಲ್ಲಿ ಕಣ್ಣೀರು ಬರಲಿಲ್ಲ. ಯಾಕಂದ್ರೆ ಅದು ಅವನ ಕಣ್ಣು. ತನ್ನ ಕಣ್ಣಲ್ಲೆ ತನ್ನ ಆತ್ಮಹತ್ಯೆ ನ್ಯೂಸ್. ಆ ದೇವ್ರು ಏನೆಲ್ಲ ಮಾಡ್ತಾನೆ ಅಲ್ಲಾ? ಆಗ ಅವಳ ಬೆಡ್ ನಲ್ಲಿ ಒಂದು ಲೆಟರ್ ಕಾಣತ್ತೆ. ಅದು ಸಂಪತ್ ಆವತ್ತು ಡಾಕ್ಟರನ್ನು ಭೇಟಿಯಾದ ನಂತರ ಬರೆದು ಇಟ್ಟದ್ದು “Hai, I am Sampath can I help you in this way dear Sneha. Hey ಯಾಕೆ ಅಳ್ತದ್ದೀಯಾ? Don’t cry, ನೀನು ಯಾವತ್ತು ನಗ್ತಾ ಇರ್ಬೇಕು. ಗೆಳತಿ. ಅವತ್ತು ನೀನೇ ಹೇಳಿದ್ದಿ ಅಲ್ವ”. Helping is part of friends ಅಂತ.ಅದಕ್ಕೆ ಹೀಗೆ ಮಾಡಿದೆ.
ಬಟ್ ಐ ಮಿಸ್ ಯೂ, ಆಲ್ ದಿ ಬೆಸ್ಟ್ ಫಾರ್ ಯುವರ್ ರಿಸಲ್ಟ್, ಟೇಕ್ ಕೇರ್ ನನ್ನ ನೆನಪಿಸಿಕೋ ಆಗಾಗ. ನಿನ್ನ ಪ್ರೀತಿಯ ಗೆಳೆಯ 13!!. Sorry sorry.. ಸಂಪತ್. ಸ್ನೇಹಾಗೆ ಮಾತೇ ಬರಲಿಲ್ಲಾ ಅಂತಾ ಗೆಳೆಯನನ್ನು ಕಳೆದುಕೊಂಡಿದ್ದಕ್ಕೆ ಅವಳು ಸುಮ್ನೆ ಅಳ್ತಾ ಇದ್ಲು. ತಿಂಗಳು ಕಳೆದು ರಿಸಲ್ಟ್ ಬರತ್ತೆ. ಸಂಪತ್ ಟಾಪ್ರ್ ಆಗಿದ್ದ. “ಸ್ನೇಹಾ” ಕಂಗ್ರ್ಯಾಟ್ಸ್ ಕಣೋ ನಾನು ಹೇಳಿದ್ದಕ್ಕೆ ಟಾಪರ್ ಆದೆ ನೀನು. ಥ್ಯಾಂಕ್ ಯೂ ಅಂತಾಳೆ. ಸಂಪತ್ ಕಣ್ಣಲ್ಲೆ ಏನೋ ಹೇಳಿದ ಅಂತಾನಿಸುತ್ತೆ ನಿಜಕ್ಕೂ. ಫ್ರೆಂಡ್ ಶಿಪ್ ಗ್ರೇಟ್ ಅಲ್ವಾ…..
- ಸತ್ಯ ಗಣೇಶ್
POPULAR STORIES :
ಪರೀಕ್ಷೆಯಲ್ಲಿ ಏನೂ ಬರೀದೇನೆ 100/100 ಅಂಕ..! 12ನೇ ತರಗತಿಯ ವಿದ್ಯಾರ್ಥಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ..?
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ
ಮೂವರು ಪ್ರಮುಖ ಕ್ರಿಕೆಟ್ ಅಧಿಕಾರಿಗಳ ಬಂಧನ..!
ಅಯ್ಯಯ್ಯೋ…ಚೂಯಿಂಗ್ ಗಮ್ ನುಂಗ್ ಬಿಟ್ರೇ..!
ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!