ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವೆ ಮನೇಕಾ ಗಾಂಧಿ ಇಂದಿರಾ ಗಾಂಧಿಯ ಸೊಸೆಯಿಂದರು. ಆದರೆ ಎಷ್ಟೋ ವರ್ಷಗಳಿಂದ ಸೋನಿಯಾ ಮನೇಕಾ ಮುಖಾಮುಖಿಯಾದ ಸಂದರ್ಭಗಳೇ ವಿರಳ. ಇವ್ರಿಬ್ಬರ ನಡುವಣ ಬಾಂಧವ್ಯವೂ ಅಷ್ಟಕಷ್ಟೇ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೇಕಾ ಅವರು ಸೋನಿಯಾರ ನಡೆಯನ್ನ ಶ್ಲ್ಯಾಘಿಸಿದ್ದಾರೆ. ಆಗಿದ್ದಿಷ್ಟೇ, ಸಚಿವೆ ಮನೇಕಾ ಗಾಂಧಿ ಭಾನುವಾರ ತಮ್ಮ ಲೋಕಸಭಾ ಕ್ಷೇತ್ರ ಫಿಲಿಬಿತ್‌ಗೆ ಭೇಟಿ ನೀಡಿದ್ದರು.. ಆ ವೇಳೆ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕೆಲ ಐಎಎಸ್ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದು, ಲಂಚ ತೆಗೆದುಕೊಂಡು ಇಚ್ಛಾನುಸಾರ ಖಾಸಗಿ ಶಾಲೆಗಳನ್ನು ಆರಂಭಿಸಲು ಅನುಮತಿ, ಮಾನ್ಯತೆ ನೀಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ತಮಗಿಲ್ಲ. ನೀವೇ ಏನಾದ್ರೂ ಮಾಡಬೇಕು ಅಂತಾ ಅಧಿಕಾರಿಗಳು ಸಚಿವೆ ಮನೇಕಾರ ಬಳಿ ಮನವಿ ಸಲ್ಲಿಸಿದ್ರು.
ಆಗ ಸಿಟ್ಟಾದ ಮನೇಕಾ ಗಾಂಧಿ ‘ ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಐಎಎಸ್‌ಗಳ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟವಾಗಬಹುದು ಅಂತಾ ವಿವರಿಸುತ್ತಾ ಸೋನಿಯಾ ಗಾಂಧಿಯವರ ವಿಷಯ ಪ್ರಸ್ತಾಪಿಸಿದ್ದಾರೆ.
ಹಿಂದೆ ಸೋನಿಯಾ ಗಾಂಧಿಯವರ ಹತ್ತಿರದ ಸಂಬಂಧಿಯೋರ್ವರು ಒಂದು ಶಾಪ್ ತೆರೆದಿದ್ದರು. ಅಲ್ಲಿ ಇಲ್ಲಿ ಸೋನಿಯಾ ಹೆಸರು ಹೇಳಿಕೊಂಡು ಲಾಭ ಹೊಂದುತ್ತಿದ್ದರು. ಆ ವಿಷಯ ತಿಳಿದ ಸೋನಿಯಾ ‘ ಆ ವ್ಯಕ್ತಿಗೂ ತಮಗೂ ಸಂಬಂಧವಿಲ್ಲ’ ಅಂತಾ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಇದರಿಂದ ಆತನಿಗೆ ತಕ್ಕ ಶಾಸ್ತಿಯಾಗಿತ್ತು. ಅದರಂತೆ ನೀವು ಕೂಡಾ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ. ಯಾರಿಗೂ ಯಾವ ಕೆಲಸಕ್ಕೂ ಲಂಚ ನೀಡದಂತೆ ಜಾಹೀರಾತು ನೀಡಿ . ಎಲ್ಲ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಿ ಭ್ರಷ್ಟಾಚಾರದ ಮೇಲೆ ಹದ್ದಿನ ಕಣ್ಣಿಡಿ. ಆಗ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತೆ ಅಂತಾ ಮನೇಕಾ ಸೂಚಿಸಿದ್ದಾರೆ.
ಒಟ್ಟಾರೆ ರಾಜಕೀಯ ರಂಗದಲ್ಲಿ ಸೋನಿಯಾ, ಮನೇಕಾ ಅಂದ್ರೆ ಉತ್ತರ ದಕ್ಷಿಣ ಅನ್ನೋ ಅಭಿಪ್ರಾಯವಿದೆ. ಹೀಗಿರುವಾಗ ಮನೇಕಾ ಗಾಂಧಿ ಕಾರ್ಯಕ್ರಮವೊಂದರಲ್ಲಿ ಸೋನಿಯಾರನ್ನು ಹೊಗಳೋ ಮೂಲಕ ವಾರ್ ವಾರ್ ಗಿತ್ತಿಯರು ಅನ್ನೋ ರಾಜಕೀಯ ರಂಗದ ಅಭಿಪ್ರಾಯವನ್ನು ಅಳಿಸಿ ನಾವು ಯಾವತ್ತಿದ್ರೂ ಓರಗಿತ್ತಿಯರು ಅಂತ ತೋರಿಸಿಕೊಟ್ಟಿದ್ದಾರೆ.
- “ಶ್ರೀ”
POPULAR STORIES :
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?
ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?