ಸೋರಿಯಾಸಿಸ್ ಮುಕ್ತಿಗೆ ಆಯುರ್ವೇದ ಚಿಕಿತ್ಸೆ

1
72

ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಬಹಳ ಮುಖ್ಯವಾದುದ್ದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ರೋಗಿ ಖಿನ್ನತೆಗೂ ಓಳಗಾಗುತ್ತಾನೆ.
ಸೋರಿಯಾಸಿಸ್ ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಈ ರೋಗವು ಶೇಕಡ 2-3% ಜನಸಂಖ್ಯೆಯಲ್ಲಿ ಕಂಡು ಬಂದಿದ್ದು, 20 ವರ್ಷಪ್ರಾಯದವರಲ್ಲಿ ಕಂಡುಬರುತ್ತದೆ.
ಸೋರಿಯಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಈ ರೋಗದಲ್ಲಿ ಚರ್ಮ ಕಣಗಳ ಉತ್ಪತ್ತಿಯ ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ, ಒಣಗಿದಂತಾಗಿ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿನಂತಹ ಪದರ ಉಂಟಾಗುತ್ತದೆ. ಕೆಲವೊಮ್ಮೆ ಅತಿಯಾಗಿ ಕೆರೆದುಕೊಂಡಾಗ ರಕ್ತ ಬರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯದೆ ಇದ್ದಲ್ಲಿ ಬಹಳ ಸಮಯದ ನಂತರ ಉಗುರುಗಳನ್ನು ಹಾಗು ಮೂಳೆಯ ಸಂದಿಗಳನ್ನು ಹಾನಿಮಾಡಿ ಸೋರಿಯಾಟಿಕ್ ಆರ್ಥರೈಟಿಸ್ ಗೆ ಒಳಪಡಿಸುತ್ತದೆ.
ಕಾರಣ – ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರು ಹಲವಾರು ಕಾರಣಗಳಿಂದ ರೋಗ ಲಕ್ಷಣವು ಉಲ್ಬಣಿಸುತ್ತದೆ. ಆಹಾರ ಪದ್ದತಿ ಹಾಗೂ ಸೇವಿಸುವ ಕ್ರಮ ಈ ರೋಗದಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ಅತಿಯಾದ ಮಾಂಸಾಹಾರ ಸೇವನೆ, ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಹುಳಿ, ಹುರುಳಿಕಾಳು, ಕಫ ವೃದ್ದಿಸುವ ಪದಾರ್ಥಗಳಾದ ಮೊಸರು, ಉದ್ದು, ವಿರುದ್ದ ಆಹಾರ ಉದಾ- ಮೊಸರಿನೊಟ್ಟಿಗೆ ಮೀನಿನ ಸೇವನೆ, ಅತಿಯಾದ ಜಿಡ್ಡಿನ ಪದಾರ್ಥ, ಮಾನಸಿಕ ಒತ್ತಡ, ದೇಹವನ್ನು ಅತಿಯಾಗಿ ಬಿಸಿಲಿಗೆ ಒಡ್ಡುವುದು ಪ್ರಮುಖ ಕಾರಣಗಳು.
ಆಹಾರ ಪದಾರ್ಥಗಳಾದ ಗೋಧಿ, ಹೆಸರುಕಾಳು, ಅರಿಶಿಣ, ಪಡವಲೆಕಾಯಿ, ಬೇವು, ಒಂದಲಗ, ಸಮಯಕ್ಕೆ ತಕ್ಕ ಹಿತಕರ ಆಹಾರ ಸೇವನೆ, ನಿತ್ಯ ಅಭ್ಯಂಜನ ಹಾಗೂ ನಿತ್ಯ ಸ್ನಾನದಿಂದ ಈ ಚರ್ಮರೋಗವನ್ನು ತಡೆಗಟ್ಟಬಹುದು. ದೀರ್ಘಕಾಲಿಕವಾಗಿ ಮತ್ತೆ ಮತ್ತೆ ಕಾಡುವ ಈ ರೋಗಕ್ಕೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದ್ದು, ರೋಗದ ಪ್ರಾರಂಭಿಕ ಅವಸ್ಥೆಯಲ್ಲೆ ಚಿಕೆತ್ಸೆ ಪಡೆಯುವುದು ಉತ್ತಮ. ಆಯುರ್ವೇದದಲ್ಲಿ ಯಾವುದೇ ಅಡ್ದ ಪರಿಣಾಮವಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದ್ದು, ವಿಶೇಷವಾಗಿ ದೇಹವನ್ನು ಶುದ್ದೀಕರಿಸುವ ಪಂಚಕರ್ಮ ಚಿಕಿತ್ಸೆ, ವ್ಯಾಧಿನಿರೋಧಕ ಶಕ್ತಿಯನ್ನು ವೃದ್ದಿಸುವ ರಸಾಯನ ಚಿಕಿತ್ಸೆ ಹಾಗೂ ಪಥ್ಯಾಹಾರಗಳ ಸೇವನೆಯೊಂದಿಗೆ ರೋಗಿಯು ಉತ್ತಮ ಚಿಕಿತ್ಸಾ ಫಲವನ್ನು ಪಡೆಯುವುದಲ್ಲದೆ ರೋಗದ ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

  • ಡಾ. ಮಹೇಶ್ ಶರ್ಮಾ. ಎಂ

POPULAR  STORIES :

ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?

ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

1 COMMENT

LEAVE A REPLY

Please enter your comment!
Please enter your name here