ಲಾಕ್ಡೌನ್ ವೇಳೆ ನಟ ಸೋನು ಸೂದ್ ಮಾಡಿದ ಸಹಾಯ ಗಳ ಬಗ್ಗೆ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಒಂದಾದ ನಂತರ ಮತ್ತೊಂದು ಸಹಾಯವನ್ನು ಮಾಡುತ್ತಾ ಬಂದ ಸೋನು ಸೂದ್ ಅವರು ರಿಯಲ್ ಹೀರೋ ಎನಿಸಿಕೊಂಡರು. ಬಡವರಿಗೆ, ರೈತರಿಗೆ, ಏನು ಇಲ್ಲದವರಿಗೆ ನಾನು ನಿಮ್ಮ ಜೊತೆ ಇದ್ದೇನೆ ಎಂದು ಬೆನ್ನು ತಟ್ಟುತ್ತಾ ಸಹಾಯ ಮಾಡಿದ ಸೋನು ಸೂದ್ ಅವರ ಸಹಾಯ ಹಸ್ತ ಚಾಚುವ ಕೆಲಸ ಇಂದಿಗೂ ಸಹ ಮುಂದುವರೆಯುತ್ತಿದೆ.
ಹೌದು ಇಂದು ಸೋನು ಸೂದ್ ಅವರು ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿರುವ ಯೂನಿಟ್ ಕೆಲಸಗಾರರಿಗೆ ಉಚಿತ ಮೊಬೈಲ್ ಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು ತೆಲುಗಿನ ಆಚಾರ್ಯ ಚಿತ್ರದಲ್ಲಿ ಸೋನು ಸೂದ್ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ 100 ಬಡ ಕೆಲಸಗಾರರಿಗೆ ನಟ ಸೋನು ಸೂದ್ ಅವರು ಉಚಿತ ಮೊಬೈಲ್ ನೀಡಿದ್ದಾರೆ. ಈ ಕೆಲಸದ ಮೂಲಕ ಮತ್ತೊಮ್ಮೆ ಸೋನು ಸೂದ್ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ..