No menu items!
11.1 C
Munich
Wednesday, April 29, 2026

ಒತ್ತಡದಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ….

Must read

ಇತ್ತೀಚಿನ ಫಾಸ್ಟ್ ಲೈಫ್, ಒತ್ತಡದ ಜೀವನದಲ್ಲಿ ಫುಲ್ ಟೆನ್ಷನ್, ಟೆನ್ಷನ್ ಇದರಿಂದ ತಲೆನೋವು ಸಾಮಾನ್ಯವಾಗಿಬಿಟ್ಟಿದೆ. ಈ ಟೆನ್ಷನ್, ತಲೆನೋವು, ಒತ್ತಡವನ್ನು ಕಡಿಮೆ ಮಾಡಲು ಈ ಟಿಪ್ಸ್ ಅನುಸರಿಸಿ

ಎಲ್ಲ ಚಿಂತೆಗೂ ಧ್ಯಾನ ಉತ್ತಮ ಪರಿಹಾರ. ದಿನದಲ್ಲಿ ಐದು ನಿಮಿಷಗಳ ಕಾಲ ಧ್ಯಾನ ಮಾಡಿದ್ರೂ ಸಾಕಾಗುತ್ತದೆ. ಕಣ್ಣು ಮುಚ್ಚಿ ಮಾಡುವ ಧ್ಯಾನ ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ರಿಲ್ಯಾಕ್ಸ್ ಮಾಡುತ್ತದೆ. ಇದು ತಲೆನೋವು ದೂರ ಹೋಗುವಂತೆ ಮಾಡುತ್ತದೆ.

ಕೆಲಸದ ಒತ್ತಡದಲ್ಲಿ ನಗು ಮಾಸಿ ಹೋಗಿದೆ. ದೊಡ್ಡದಾಗಿ ಮನಸ್ಸು ಬಿಚ್ಚಿ ನಗುವವರ ಸಂಖ್ಯೆ ಕಡಿಮೆಯಾಗಿದೆ. ಈ ನಗು ಸರ್ವ ರೋಗಕ್ಕೂ ಮದ್ದು. ಮನಸ್ಸು ಬಿಚ್ಚಿ ನಕ್ಕಾಗ ಒತ್ತಡ ಕಡಿಮೆಯಾಗುವ ಜೊತೆಗೆ ನಿಮ್ಮ ಮೂಡ್ ಸರಿಯಾಗುತ್ತದೆ.

ಒತ್ತಡ ಕಡಿಮೆ ಮಾಡಲು ಡಾನ್ಸ್ ಕೂಡ ಉತ್ತಮ ಮಾರ್ಗ. ಚಿಂತೆ, ಒತ್ತಡ ನಿಮ್ಮನ್ನು ಕಾಡುತ್ತಿರುವ ವೇಳೆ ನಿಮಗಿಷ್ಟವಾಗುವ ಹಾಡಿಗೆ ಡಾನ್ಸ್ ಮಾಡಿ. ಡಾನ್ಸ್ ಮಾಡಿದ್ರೆ ದೇಹಕ್ಕೆ ಶಕ್ತಿ ಬರುತ್ತದೆ. ಒತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿರುವ ರಕ್ತ ಸಂಚಾರ ಸುಲಭವಾಗುತ್ತದೆ.

ಒತ್ತಡ ಕಾಡುತ್ತಿದ್ದಂತೆ ಸ್ವಲ್ಪ ವಾಕಿಂಗ್ ಮಾಡಿ, ರೊಮ್ಯಾನ್ಸ್ ಮಾಡಿ ಇದು ಮೆದುಳಿನಲ್ಲಿ ಉತ್ತಮ ರಾಸಾಯನಿಕವನ್ನು ಬಿಡುಗಡೆ ಮಾಡುವುದ್ರಿಂದ ಒತ್ತಡ ಕಡಿಮೆಯಾಗುತ್ತದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article