ಐಪಿಎಲ್ ನಲ್ಲಿ ಧೋನಿ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಇದರ ನಡುವೆಯೇ ಗಂಗೂಲಿ ಮಾಹಿಯನ್ನು ಕುಟುಕುವುದರ ಮೂಲಕ ಧೋನಿ ನಾಯಕತ್ವದ ಬಗ್ಗೆ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧೋನಿ ನಾಯಕನಾಗಿ ಮುಂದುವರೆಯುದಿಲ್ವಾ. ಟೀಮ್ಇಂಡಿಯಾದ ನಾಯಕತ್ವ ಮಾಹಿಯ ಕೈ ತಪ್ಪುತ್ತಾ ಅನ್ನೋ ಪ್ರಶ್ನೆಗಳ ನಡುವೆ ಗಂಗೂಲಿ ಹೊಸದೊಂದು ಪ್ರಶ್ನೆ ಎಸೆದಿದ್ದಾರೆ. ಇದು ಟೀಮ್ ಇಂಡಿಯಾದ ಕೋಚ್ ಯಾರಾಗ್ತಾರೆ ಅನ್ನೋ ಪ್ರಶ್ನೆ ಜೊತೆ ಟೀಮ್ ಇಂಡಿಯಾದ ನಾಯಕನೂ ಬದಲಾಗ್ತಾರಾ ಅನ್ನೋ ಸಂಶಯಗಳು ವ್ಯಕ್ತವಾಗೋ ಹಾಗೆ ಮಾಡಿದೆ.
ಈಗಾಗ್ಲೇ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ವಾರ್ ಶುರುವಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿದ್ದು, ಏಕದಿನ ಹಾಗೂ ಟಿ ಟ್ವೆಂಟಿಯ ಮೇಲೆ ಕಣ್ಣಿಟ್ಟಿದ್ದಾರೆ. ಇದರ ನಡುವೆ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಫಾರ್ಮ್ ನಲ್ಲಿಲ್ಲ. ಇನ್ನೂ ಐಪಿಎಲ್ ನಲ್ಲಿ ರೈಸಿಂಗ್ ಪುಣೆ ತಂಡ ಸೋಲಿನ ಸುಳಿಗೆ ಸಿಲುಕಿದೆ.
ಟೀಂ ಇಂಡಿಯಾ ಮಾಜಿನಾಯಕ ಸೌರವ್ ಗಂಗೂಲಿ ಕೂಡ ಧೋನಿ ಯುಗ ಮುಗಿಯುತ್ತಾ ಬಂದಿದೆ ಅನ್ನೋದನ್ನ “ಧೋನಿ ನಾಯಕನಾಗಿ ಐಪಿಎಲ್ ನಲ್ಲಿ ಫೇಲ್ಯೂರ್ ಆಗಿದ್ದಾರೆ ಅನ್ನುವುದರ ಬಗ್ಗೆ ನಾನು ಮಾತಾಡುತ್ತಿಲ್ಲ. ಆದರೆ ಆಯ್ಕೆ ಸಮಿತಿ ಈಗ ಚಿಂತಿಸಬೇಕಿದೆ. 2019ರ ವಿಶ್ವಕಪ್ ಗೂ ಧೋನಿಯೇ ನಾಯಕ ಅಂತ ಬಿಂಬಿಸುವುದು ಸರಿಯಲ್ಲ. ಅದರಲ್ಲೂ ಮುಂದಿನ ನಾಲ್ಕು ವರ್ಷಗಳ ಕಾಲ ಧೋನಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಾರಾ ಅನ್ನೋದು ಪ್ರಶ್ನೆಯಾಗಿದೆ” ಹೀಗಂತ ಹೇಳುವುದರ ಮೂಲಕ ನಾಯಕನಾಗಿ ಧೋನಿಯನ್ನು ಕೆಳಗಿಳಿಸಬೇಕು ಅನ್ನೋ ಕೂಗಿಗೆ ಗಂಗೂಲಿ ಪರೋಕ್ಷ ಧ್ವನಿಯಾಗಿದ್ದಾರೆ.
- ಶ್ರೀ
POPULAR STORIES :
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಅನುಷ್ಕಾ ಇದ್ದರೇನಂತೆ..? ಚಾನ್ಸ್ ಸಿಕ್ಕರೇ ಕೊಹ್ಲೀನಾ ಮದ್ವೆ ಆಗ್ತೀವಿ..!?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?