70 ಜನ ಫೈಟರ್ ಗಳ ಜೊತೆ ರೋರಿಂಗ್ ಸ್ಟಾರ್ ಫೈಟ್..!! ಇದಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರಾ..!!
ಭರಾಟೆ.. ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಚೇತನ್ ನಿರ್ದೇಶನದ ಸಿನಿಮಾ.. ಬಹದ್ದೂರ್ ಸಿನಿಮಾವಾದ ಬಳಿಕ ನಿರ್ದೇಶಕ ಚೇತನ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಮಾಡಲು ಹೊರಟಿರುವ ಸಿನಿಮಾವೇ ಈ ಭರಾಟೆ.. ಇಬ್ಬರದ್ದು ಹಿಟ್ ಸಿನಿಮಾಗಳಿವೆ.. ಹೀಗಾಗೆ ಭರಾಟೆಯೂ ದೊಡ್ಡ ಹಿಟ್ ಆಗುವ ನಿರೀಕ್ಷೆಗಳ ಬಗ್ಗೆ ಈಗಾಗ್ಲೇ ಮಾತುಗಳು ಶುರುವಾಗಿದ್ದು, ಸಿನಿಮಾದ ಮೇಕಿಂಗ್ ಸಹ ಅದ್ಬುತವಾಗಿ ಮೂಡಿ ಬರ್ತಿದೆ..
ರೋರಿಂಗ್ ಸ್ಟಾರ್ ಅಭಿಯದ ಸಿನಿಮಾವಾಗಿರೋದ್ರಿಂದ ಆಕ್ಷನ್ ಇದ್ದೆ ಇರುತ್ತೆ.. ಆದರೆ ಭರಾಟೆಯಲ್ಲಿ ಅದರ ಅಬ್ಬರ ಜೋರಾಗೆ ಇರಲಿದೆ ಅನ್ನೋದಕ್ಕೆ ಈಗಷ್ಟೇ ಕಂಪ್ಲೀಟ್ ಆಗಿರುವ ಚಿತ್ರದ ಫೈಟ್ ಶೂಟಿಂಗ್ ಸಾಕ್ಷಿಯಾಗಿದೆ.. ಯಾಕಂದ್ರೆ ಇದೊಂದು ಫೈಟ್ ನಲ್ಲಿ ಮುರುಳಿ 70 ಜನ ಫೈಟರ್ ಗಳೊಂದಿಗೆ ಹೊಡೆದಾಡಿದ್ದಾರೆ..
ರವಿವರ್ಮ ಸ್ಟೆಂಟ್ ಕಂಪೋಸ್ ಮಾಡಿದ್ದು, ಬರೊಬ್ಬರಿ 60 ಲಕ್ಷ ವೆಚ್ಚದಲ್ಲಿ ಈ ಪೈಟ್ ಮೂಡಿಬಂದಿದೆ.. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಚಿತ್ರೀಕರಣ ಮಾಡಲಾಗಿದ್ದು, 6 ದಿನಗಳ ದೀರ್ಘವಾದಿಯಲ್ಲಿ ಫೈಟ್ ಶೂಟ್ ಮಾಡಲಾಗಿದೆ.. ಈ ಮೂಲಕ ಎರಡನೆ ಹಂತದ ಚಿತ್ರೀಕರಣ ಭರ್ಜರಿಯಾಗಿ ಪೂರ್ಣಗೊಂಡಿದೆ..