ನಟಿ ಶ್ರೀದೇವಿ ಅವರ ಸಾವಿನ ರಹಸ್ಯ ಬದಲಾಗಿದೆ. ಶ್ರೀದೇವಿ ಅವರು ಹಠಾತ್ ನೀರಿನ ಟಬ್ ಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈ ವಿಧಿ ವಿಜ್ಞಾನ ಪ್ರಯೋಗಾಲಯ ನಡೆಸಿದ ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದುಬಂದಿದೆ.
ದುಬೈ ಪೊಲೀಸರು ಪ್ರಕರಣವನ್ನು ಪಬ್ಲಿಕ್ ಪ್ರಾಸಿಕ್ಯೂಶನ್ ಗೆ ವರ್ಗಾಯಿಸಿದ್ದಾರೆ ಎಂದು ದುಬೈ ಮೀಡಿಯಾ ಆಫೀಸ್ ಟ್ವೀಟ್ ಮಾಡಿದೆ.
ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಹೀಗೊಂದು ರಿಪೋರ್ಟ್ ಬಂದಿದ್ದು ಸಾವಿನ ಸುತ್ತ ಹತ್ತಾರು ಅನುಮಾನಗಳು ಮೂಡಿವೆ.