ನಿಮಗೆ ನೆನಪಿರಬಹುದು? 2005ರಲ್ಲಿ ತೆರೆಕಂಡ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ‘ವರ್ಷ’, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಶಾಸ್ತ್ರಿ’ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ‘ಶಂಭು’ ಚಿತ್ರದ ನಾಯಕಿ ಮಾನ್ಯ.
ಸ್ಯಾಂಡಲ್ ವುಡ್ , ಟಾಲಿವುಡ್, ಮಾಲಿವುಡ್, ಕಾಲಿವುಡ್ ಗಳಲ್ಲಿ ಬೇಡಿಕೆ ಪಡೆದ ನಟಿ ಇವರು. ಈಗ ಮಾನ್ಯ ಮದುವೆಯಾಗಿದ್ದಾರೆ. ಮಗು ಮತ್ತು ಪತಿ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ.ಈ ಮಾನ್ಯ ಅವರಿಗೆ ಶ್ರೀಮುರುಳಿ ಮೆಸೇಜ್ ಕಳುಹಿಸಿದ್ದಾರೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಡಾ. ಶಿವರಾಜ್ ಕುಮಾರ್ ನಡೆಸಿಕೊಡುತ್ತಿರುವ ನಂ 1 ಯಾರಿ ಕಾರ್ಯಕ್ರಮದಲ್ಲಿ ಶಿವಣ್ಣ, ‘ ನಿಮ್ಮ ಜೊತೆ ಆ್ಯಕ್ಟ್ ಮಾಡಿರುವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ ಎಂದು ಕೇಳಿದ್ರು. ಅಷ್ಟೇ ಅಲ್ಲ ಆ ಹೀರೋಯಿನ್ ಗೆ ‘ಐ ಲವ್ ಯುವರ್ ಐಸ್’ ಅಂತ ಮೆಸೇಜ್ ಮಾಡ್ಬೇಕು. ಇಲ್ಲಂದ್ರೆ ಮುರುಳಿಗೆ ನಿಮ್ಮ ಕಣ್ಣಿಷ್ಟ ಅಂತ ಮೆಸೇಜ್ ಮಾಡ್ತೀನಿ ಅಂತ ಶಿವಣ್ಣ ಹೇಳಿದ್ರು. ಆಗ ಶ್ರೀಮುರುಳಿ ಅವರೇ ಮಾನ್ಯಗೆ ಮೆಸೇಜ್ ಮಾಡಿ ಟಾಸ್ಕ್ ಪೂರ್ಣಗೊಳಿಸಿದರು.
ಮುರುಳಿ ಮತ್ತು ಅವರ ಪತ್ನಿ ಇಬ್ಬರಿಗೂ ವಿದ್ಯಾ ಫ್ರೆಂಡ್. ವಿದ್ಯಾ ಅವರು ಇತ್ತೀಚೆಗೆ ನ್ಯೂಯಾರ್ಕ್ ಗೆ ಹೋದಾಗ ಹೋದಾಗ ಮಾನ್ಯ ಅವರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.