ಸರ್ಕಾರದ ಸ್ಟಿಂಗ್ ಆಪರೇಷನ್: 500 ಬ್ಯಾಂಕ್‍ಗಳ ಬಣ್ಣ ಬಯಲು..!

Date:

500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ಬ್ಲಾಕ್ ಮನಿಯನ್ನ ವೈಟ್ ಮನಿಯತ್ತ ಮಾರ್ಪಾಡು ಮಾಡೋದು ಹೆಂಗಪ್ಪಾ ಅಂತ ಚಿಂತೆಯಲ್ಲಿದ್ದಾಗ ಸ್ವತಃ ಬ್ಯಾಂಕ್‍ನ ಅಧಿಕಾರಿಗಳೇ ಕಾಳಧನಿಕರಿಗೆ ಸಾಥ್ ನೀಡಿ ಅವರ ಪಾಲಿನ ದೇವರು ಆಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಐಟಿ ದಾಳಿ ನಡೆದಾಗ ಅವರ ಬಳಿ ಸಿಕ್ಕ ಕೋಟ್ಯಾಂತರ ಹೊಸ ನೋಟುಗಳು..! ಬ್ಯಾಂಕ್‍ಗಳಲ್ಲಿ ಹೀಗೊಂದು ಅಕ್ರಮಗಳು ನಡೆಯುತ್ತಿವೆ ಎಂದು ತಿಳಿದಕೂಡಲೇ ಬ್ಯಾಂಕ್ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟು ಸ್ಟಿಂಗ್ ಆಪರೇಷನ್ ಮೂಲಕ ಪರಿಶೀಲನೆ ನಡೆಸುತ್ತಿವೆ. ಸರ್ಕಾರ ತನ್ನ ಏಜೆಂಟ್‍ಗಳ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದು, ದೇಶದ ಸುಮಾರು 500 ಖಾಸಗಿ ಮತ್ತು ಸರಕಾರಿ ಸಾಮ್ಯದ ಬ್ಯಾಂಕ್‍ಗಳ ಮೇಲೆ ಸ್ಟಿಂಗ್ ಕಾರ್ಯಾಚರಣೆ ಕೈಗೊಂಡಿದ್ದು ಕಾರ್ಯಾಚರಣೆಯಲ್ಲಿ ಸುಮಾರು 400 ಸಿಡಿಗಳನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಿದೆ ಎಂದು ವರದಿ ನೀಡಿದೆ. ಬ್ಯಾಂಕ್ ಮ್ಯಾನೇಜರ್‍ಗಳು, ಕ್ಯಾಶರ್‍ಗಳು ನಕಲಿ ದಾಖಲೆಗಳನ್ನು ಸೃಷ್ಠಿಸಿ ಕಾಳಧನಿಕರ ಕಪ್ಪು ಹಣವನ್ನು ಬಿಳಿಯನ್ನಾಗಿ ಮಾರ್ಪಾಟು ಮಾಡಲು ಸಹಕರಿಸುತ್ತಿದ್ದು, ಅಂತಹ ಅಧಿಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಇನ್ನು ಅಕ್ರಮ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಕೇಂದ್ರ ಸರ್ಕಾರ ಅಕ್ರಮಗಳಿಗೆ ಕಡಿವಾಣ ಮತ್ತು ಬ್ಯಾಂಕ್‍ಗಳಲ್ಲಿ ಯಾವ ರೀತಿಯಲ್ಲಿ ಅಕ್ರಮಗಳು ನಡೆಯುತ್ತಿದೆ ಎಂಬುದನ್ನು ಅರಿಯಲು ಸ್ಟಿಂಗ್ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಹೇಳಲಾಗಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....