ಪೋಷಕರೇ ನೀವು ಸಿಗರೇಟ್ ಸೇದಿದ್ರೆ‌ ನಿಮ್ಮ ಮಕ್ಕಳು ಏನಾಗ್ತಾರೆ ಗೊತ್ತಾ?

0
160

ಪೋಷಕರು ಮನೆಯಲ್ಲಿ ಬೀಡಿ, ಸಿಗರೇಟ್ ಸೇದೋದ್ರಿಂದ ಅಂದ್ರೆ ಧೂಮಪಾನ ಮಾಡುವುದ್ರಿಂದ‌ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ನಿಮ್ಗೆ ಗೊತ್ತಿರಬಹುದು. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ಹೇಳಿವೆ. ಆದರೆ, ನಿಮಗಿದು ಗೊತ್ತೇ? ಮನೆಯಲ್ಲಿ ಧೂಮಪಾನ ಮಾಡುವುದರಿಂದ ಅದು ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ…! ಇದು ಸಹ ಹಿಂದಿನ ಒಂದು ಸಂಶೋಧನೆಯಿಂದ ತಿಳಿದು ಬಂದಿರೋ ವಿಷ್ಯ.

ಕೆನಡಾದ ಯುನಿವರ್ಸಿಟಿ ಆಫ್ ಮಾಂಟ್ರೀಲ್ನ ತಜ್ಞರ ಅಧ್ಯಯನದಿಂದ ಈ ಸಂಗತಿ ತಿಳಿದು ಬಂದಿದೆ.
ಸಂಶೋಧನೆ ಪ್ರಕಾರ ಧೂಮಪಾನದ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಮುಂದೆ ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗುತ್ತಾರೆ. ಅವರಲ್ಲಿ ಕೋಪ ಹಾಗೂ ಅಸಹನೆ ಪ್ರವೃತ್ತಿ ಹೆಚ್ಚಾಗಿ ಕಾನೂನು ಬಾಹಿರ ಕೆಲಸದತ್ತ ಮುಖಮಾಡುವಂತೆ ಮಾಡುತ್ತವೆ. 12ನೇ ವಯಸ್ಸಿಗೆ ಶಾಲೆ ತೊರೆಯುವುದು ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದು ಈ ಮಕ್ಕಳಲ್ಲಿ ಕಂಡುಬರುತ್ತದೆ ಎಂದಿದ್ದಾರೆ. ಮಿದುಳು ಬೆಳವಣಿಗೆಯ ಹಂತದಲ್ಲಿ ಮಕ್ಕಳು ಧೂಮ ಪಾನದ ಸಂಪರ್ಕಕ್ಕೆ ಬರುತ್ತಾರೆ. ಇದರಿಂದ ಅವರ ಮನಸ್ಸು ಕೆಟ್ಟದ್ದು ದುಷ್ಕೃತ್ಯದ ಕಡೆಗೆ ಆಕರ್ಷಿತಗೊಳ್ಳುತ್ತದಂತೆ…ಪೋಷಕರೇ ಹುಷಾರು…ನಿಮ್ಮ ಮಕ್ಕಳ‌ ಭವಿಷ್ಯ ನಿಮ್ಮ ಕೈಯಲ್ಲಿದೆ.

LEAVE A REPLY

Please enter your comment!
Please enter your name here