ನಾವು ಶಾಲೆಗೆ ಹೋಗುತ್ತಿದಾಗ ಕೆಲವೊಮ್ಮೆ ಕಲ್ಪಿಸಿದ್ದುಂಟು”ನಮ್ಮ ಉತ್ತರ ಪತ್ರಿಕೆಯನ್ನು ನಾವೆ ತಿದ್ದುವಂತಿದ್ದರೆ ಅದೆಷ್ಟು ಚೆನ್ನ” ಎಂದು.ಆದರೆ ಈ ಯೋಚನೆ ಬರೋಕೆ ಮೊದಲೇ ಅದನ್ನು ಸಾಕಾರ ಮಾಡಿದ ಈ ಸಾಕಾರ ಮೂರ್ತಿ ಅವನೇ ಬುದ್ದಿವಂತ ಹರ್ಷದ್ ಸರ್ವಯ್ಯ.
ಹರ್ಷದ್ ಸರ್ವಯ್ಯ ಎಂಬವನು ಮೂಲತಃ ಗುಜರಾಥ್ ನ ಶಾಲೆಯೊಂದರಲ್ಲಿ ಓದುತ್ತಿರುವ 12ನೇ ತರಗತಿಯ ವಿದ್ಯಾರ್ಥಿ.ಅವನು ಬರೆದ ಪರೀಕ್ಷೆಗಳಿಗೆ ಅವನೇ ಪರೀಕ್ಷಾರ್ಥಿ ಹಾಗೂ ಅವನೇ ಪರೀಕ್ಷಕನೂ ಆಗಿಬಿಟ್ಟಿದ್ದಾನೆ.ಅವನು ತನ್ನ ಅರ್ಥಶಾಸ್ತ್ರ ಹಾಗೂ ಭೂಗೋಳ ಶಾಸ್ತ್ರ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಮೇಲ್ವಿಚಾರರ ಕೈಗೆ ಹಸ್ತಾಂತರಿಸುವುದಕ್ಕೆ ಮುನ್ನ ಕೆಂಪು ಶಾಯಿಯಿಂದ ಉತ್ತರ ಪತ್ರಿಕೆಯನ್ನುತಿದ್ದಿ 100/100 ಅಂಕ ಕೊಟ್ಟ್ ಬಿಟ್ಟಿದ್ದಾನೆ.
7 ಅಧ್ಯಾಪಕರನ್ನೊಳಗೊಂಡ ಗ್ರೂಪ್ ನ ಅಂಕ ತೋರಿಸಲಾಗುವ ಕಾಲಂನ್ನು ಇವನು ಹಾಗೇ ಖಾಲಿ ಬಿಟ್ಟಿದ್ದ ಇದರಿಂದ ಇವನ ಈ ಅತೀ ಚಾಣಾಕ್ಷ ಬುದ್ದಿಯು ಬೆಳಕಿಗೆ ಬಂತು ಅದಲ್ಲದೆ ಭೂಗೋಳ ಶಾಸ್ತ್ರದ ಅಧ್ಯಾಪಕರು ಸಂಶಯದಿಂದ ಉತ್ತರವನ್ನು ಗಮನಿಸಿದಾಗ 35/100 ಅಂಕ ಲಭ್ಯವಾಯಿತು.
ಮತ್ತೊಮ್ಮೆ ಉತ್ತರ ಪತ್ರಿಕೆಯನ್ನು ಕಂಪ್ಯೂಟರ್ ಸಹಾಯದಿಂದ ಪರೀಕ್ಷಿಸಿದಾಗ ಅವನು ಪಡೆದ ಅಂಕಗಳು
ಗುಜರಾಥಿ -13,ಇಂಗ್ಲೀಷ್ -12,ಸಂಸ್ಕೃತ-4,ಸೊಷ್ಯೋಲಜಿ-20,ಸೈಕೋಲಜಿ-5 ಹಾಗೂ ಭೂಗೋಳ ಶಾಸ್ತ್ರ 35 ಆಗಿತ್ತು.
ಗುಜರಾಥ್ ಸೆಕಂಡರಿ ಮತ್ತು ಹೈಯರ್ ಸೆಕಂಡರಿ ಎಜುಕೇಷನ್ ಬೋರ್ಡ್ ಈ ಹುಡುಗನ ವಿರುದ್ದ ನಕಲು ಮಾಡಿದ ಆರೋಪದಲ್ಲಿ ದೂರು ದಾಖಲಿಸಿದೆ.ಅವನು ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಅವನನ್ನು ಮುಂದೆ ನಡೆಯುವ 2 ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದು..ಜಿ.ಎಸ್.ಹೆಚ್.ಎಸ್.ಈ.ಬಿ.ಸೆಕ್ರೆಟರಿಯಾದ ಜಿ.ಡಿ.ಪಾಟೀಲವರು ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಹಾಗೂ ಇದರಲ್ಲಿ ಸಂಬಂಧ ಪಟ್ಟ ಅಧ್ಯಾಪಕರಿಗೂ ಎಚ್ಛರಿಕೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಪಾಪ! ಈ ತರಲೆ ಸುಬ್ಬನ ಆಪರೇಷನ್ ಮಿಷನ್ ಈ ಥರದಲ್ಲಿ ಫೈಲ್ ಅಗೊಯ್ತಲ್ಲ???
- ಸ್ವರ್ಣಲತ ಭಟ್
POPULAR STORIES :
ಚೀನಾದಲ್ಲಿ ಬೆತ್ತಲೆ ಚಿತ್ರ ಕೊಟ್ರೆ ಲೋನ್ ಕೊಡ್ತಾರೆ..! ಮಹಿಳೆಯರ ನಗ್ನ ಚಿತ್ರವೇ ಲೋನ್‍ಗೆ ಶೂರಿಟಿ…!
ಬೊಕ್ಕುತಲೆ ಕಸಿ, ವಿಗ್ ಜೋಡಣೆ ಚಟುವಟಿಕಿಗೆ ಬ್ರೇಕ್ : ಯು.ಟಿ ಖಾದರ್
ಜ್ಯೇಷ್ಟಮಧುವೆಂಬ ಶ್ರೇಷ್ಟ ಔಷಧಿ | ಅಸಿಡಿಟಿ, ಹೊಟ್ಟೆ ಉರಿ ಅಥವಾ ಜಠರದ ಹುಣ್ಣಿನಲ್ಲಿ ಇದು ಶಮನಕಾರಿ
ಮೂವರು ಪ್ರಮುಖ ಕ್ರಿಕೆಟ್ ಅಧಿಕಾರಿಗಳ ಬಂಧನ..!
ಅಯ್ಯಯ್ಯೋ…ಚೂಯಿಂಗ್ ಗಮ್ ನುಂಗ್ ಬಿಟ್ರೇ..!
ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!
`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!
ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!