ಧ್ರುವ ಅವರ ಕೊನೆಯ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಸುದೀಪ್….!

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಒದಗಿಸುವುದರಲ್ಲಿ ಕಿಚ್ಚ ಯಾವಾಗಲೂ ಸೈ.
ಸ್ಟಾರ್ ನಟರಾಗಿದ್ದರೂ ಆಗಾಗಾ ಅತಿಥಿ ಪಾತ್ರಗಳಲ್ಲಿ ನಟಿಸಿ ಹೊಸಬರಿಗೆ ಪ್ರೋತ್ಸಾಹ ನೀಡೋ ಗುಣ ಸುದೀಪ್ ಅವರದ್ದು.
ಇದೀಗ ಸುದೀಪ್ ಧ್ರುವ ಶರ್ಮಾ ಹಾಗೂ ರಾಗಿಣಿ ಅಭಿನಯದ ‘ಕಿಚ್ಚು’ ಸಿನಿಮಾದಲ್ಲಿ ವೈದ್ಯರಾಗಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಕಿಚ್ಚನ ಎಂಟ್ರಿ ಇದೆಯಂತೆ. ಗೆಳೆಯ ಧ್ರುವಗೆ ಸಿನಿಮಾದಲ್ಲೂ ಗೆಳೆಯನಾಗಿ ಸುದೀಪ್ ಬಣ್ಣ ಹಚ್ಚಿದ್ದಾರೆ.


ಸಿನಿಮಾರಂಗದಿಂದ ಆಚೆಗೂ ಧ್ರುವ ಹಾಗೂ ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಸಿಸಿಎಲ್ ನಲ್ಲಿಯೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.‌ ಇತ್ತೀಚೆಗೆ ಧ್ರುವ ಅಗಲಿದಾಗ ಸುದೀಪ್ ಕಂಬನಿ ಮಿಡಿದಿದ್ದರು.
ಧ್ರುವ ಅವರನ್ನು ಕೊನೆಯ ಬಾರಿ ಪರದೆಯಲ್ಲಿ ನೋಡಲಿದ್ದೇವೆ. ಕಿಚ್ಚು ಈ ವಾರ ತೆರೆಗೆ ಬರಲಿದೆ.


ನನ್ನ ಜೀವನದ ಭಾಗವೇ ಆಗಿದ್ದ ಪ್ರೀತಿಯ ಸಹೋದರ ಧ್ರುವನನ್ನು ಕೊನೆಯ ಬಾರಿ ಪರದೆ ಮೇಲೆ ನೋಡುತ್ತಿದ್ದೇನೆ.‌ಅವನ ಕೊನೆಯ ಸಿನಿಮಾದಲ್ಲಿ ನಾನೂ ನಟಿಸಿದ್ದೇನೆ. ಆತ ದೇವರು ಕೊಟ್ಟ ಅಪರೂಪದ ಕೊಡುಗೆ. ಅವನೊಬ್ಬ ಪ್ರತಿಭಾವಂತ ನಟ ಎಂದು ಹೇಳಲು ಹೆಮ್ಮೆಯಿದೆ ಎಂದಿದ್ದಾರೆ ಸುದೀಪ್.


ಪ್ರದೀಪ್ ರಾಜ್ ನಿರ್ದೇಶನದ ಈ ಚಿತ್ರ ಈ ವಾರ ತೆರೆ ಕಾಣಲಿದೆ. ರಾಗಿಣಿ ಗ್ಲಾಮರ್‌ ರಹಿತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.‌ ಚಿತ್ರದಲ್ಲಿ ರಾಗಿಣಿಯದ್ದು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡೋ ಕಾರ್ಮಿಕಳ ಪಾತ್ರ. ಧ್ರುವ ಬುಡಕಟ್ಟು ಹುಡುಗನ ಪಾತ್ರದಾರಿ. ಕಿಚ್ಚ ಸುದೀಪ್ ವೈದ್ಯ.
ಧ್ರುವನ ಜೋಡಿಯಾಗಿ ಬಹುಭಾಷಾ ನಟಿ ಅಭಿನಯಾ ಬಣ್ಣ ಹಚ್ಚಿದ್ದಾರೆ. ನಿಜ ಜೀವನದಲ್ಲೂ ಈಕೆ ಧ್ರುವ ಅವರಂತೆ ವಿಶೇಷ ಚೇತನರು.‌ ಕಿವಿ ಕೇಳಿಸದ ಧ್ರುವ ಮತ್ತು ಅಭಿನಯಾ ಚಿತ್ರದಲ್ಲೂ ಇಂತಹದ್ದೇ ಪಾತ್ರ ‌ನಿಭಾಯಿಸಿದ್ದಾರೆ ಎನ್ನೋದು ಮತ್ತೊಂದು‌ ವಿಶೇಷ.

 

Share post:

Subscribe

spot_imgspot_img

Popular

More like this
Related

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ ಬೆಂಗಳೂರು:...

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...