ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಪ್ರಯೋಗಿಸುತ್ತಿರುವ ಅಸ್ತ್ರಗಳಲ್ಲಿ ಸೆಲಬ್ರಿಟಿ ಗಳೂ ಸಹ ಇದ್ದಾರೆ.
ಬಾದಾಮಿಯಲ್ಲಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡಲು ನಟ ಕಿಚ್ಚ ಸುದೀಪ್ ರೆಡಿ ಇದ್ದಾರೆ. ಈ ವಾರದಲ್ಲಿ ಅವರು ಬಾದಮಿಯಲ್ಲಿ ಸಿಎಂ ಪರ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ , ಸುದೀಪ್ ಸಿಎಂ ಪರ ಪ್ರಚಾರ ಮಾಡದಂತೆ ನಾಯಕ ಸಮುದಾಯದವರು ಆಗ್ರಹಿಸುತ್ತಿದ್ದಾರೆ
ಸಿಎಂ ವಿರುದ್ಧವಾಗಿ ನಾಯಕ ಸಮುದಾಯದ ಶ್ರೀರಾಮುಲು ಕಣಕ್ಕಿಳಿದಿರುವುದರಿಂದ ನೀವು ಸಿದ್ಧರಾಮಯ್ಯ ಪರ ಪ್ರಚಾರ ಮಾಡಬಾರದು ಎಂದು ನಾಯಕ ಸಮುದಾಯದವರು ಸುದೀಪ್ ಅವರನ್ನು ಒತ್ತಾಯಿಸಿದ್ದಾರೆ. ಸುದೀಪ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕು.