ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟ ಕರುನಾವಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಇಂದು 43 ನೇ ಹುಟ್ಟು ಹಬ್ಬದ ಸಂಭ್ರಮ. ಭಾರತ್ ಬಂದ್ ಹಿನ್ನಲೆಯಲ್ಲಿಯೂ ಸಹ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗದೇ ಬಾರೀ ವಿಜೃಂಭಣೆಯಿಂದ ನಡೆಯಿತು. ರಾತ್ರಿ ವೇಳೆಯಲ್ಲಿಯೇ ಕಿಚ್ಚಾ ಅಭಿಮಾನಿಗಳು ತಮ್ಮ ನಿವಾಸದ ಬಳಿ ಬೀಡು ಬಿಟ್ಟಿದ್ದು, ರಾತ್ರಿಯೇ ತಮ್ಮ ನೆಚ್ಚಿನ ನಾಯಕನ ಬರ್ತ್‍ಡೇಯನ್ನು ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳ ಬಳಗ ಶೂಭ ಹಾರೈಸಿದ್ದಾರೆ. ಸ್ಯಾಂಡಲ್‍ವುಡ್ನ ಕಿಚ್ಚಾ ಎಂದೇ ಎಲ್ಲರ ಮನೆಮಾತಾಗಿರುವ ನಟ ನಿರ್ದೇಶಕ ಸುದೀಪ್ ಸ್ಪರ್ಶ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ಆನಂತರ ತೆಲುಗು,ತಮಿಳು ಹಿಂದಿ ಚಿತ್ರಗಳಲ್ಲಿ ನಾಯಕ ನಟನಾಗಿ ಹಾಗೂ ಖಳನಾಯಕನಾಗಿಯೂ ಗುರುತಿಸಿಕೊಂಡು ಪರ ಭಾಷೆಯಲ್ಲೂ ಬೇಡಿಕೆಯ ನಟರಾದರು. ಕನ್ನಡದಲ್ಲಿ ರನ್ನ, ನಮ್ಮಣ್ಣ, ನಲ್ಲ, ಮುಸ್ಸಂಜೆ ಮಾತು ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿರುವ ಸುದೀಪ್ ತಮ್ಮ ಇತ್ತೀಚೆನ ಮತ್ತೊಂದು ಚಿತ್ರ ಕೋಟಿಗೊಬ್ಬ-2 ಪ್ರೇಕ್ಷರ ಮನ ಗೆಲ್ಲುವಲ್ಲಿ ಸಫಲವಾಗಿದೆ.
POPULAR STORIES :
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!