ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಯಶ್ ನನ್ ಮುಂದೆ ಬಚ್ಚಾಗಳು ಎಂದು ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ನಾಯಕನಟ್ಟಿಯಲ್ಲಿ ಸುದೀಪ್ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗೆ ಆಗಮಿಸಿದ್ದಕ್ಕೆ ಕೋಪಗೊಂಡ ತಿಪ್ಪೇಸ್ವಾಮಿ, ಸುದೀಪ್ , ಯಶ್ ಇವರೆಲ್ಲಾ ನನ್ನ ಮುಂದೆ ಇನ್ನೂ ಬಚ್ಚಾಗಳು. ನಾನು ಇವರಿಗಿಂತ ಮೊದಲೇ ಬಣ್ಣ ಹಚ್ಚಿದ ಕಲಾವಿದ. ಹೀಗಾಗಿ ಇವರೆಲ್ಲಾ ಪ್ರಚಾರ ಮಾಡಿದರೆ ಜನ ಮರಳಾಗಲ್ಲ…! ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲ್ಲೋದಿಲ್ಲ ಎಂದು ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.
ಬಳ್ಳಾರಿಯವರ ಆಟ ಇಲ್ಲಿ ನಡೆಯೋದಿಲ್ಲ. ಆ ಜನಾರ್ಧನ ರೆಡ್ಡಿಗೆ ಮಾಚಿಗೆ ಆಗ್ಬೇಕು. ಅವರಿಗೆ ಬಿಜೆಪಿಯೊಂದಿಗೆ ಬರಬೇಡಿ ಅಂದರೂ ನಾಚಿಕೆ ಇಲ್ದೇ ಬರ್ತಾರೆ. ಕದ್ದು ಮುಚ್ಚಿ ಪ್ರಚಾರ ಮಾಡ್ತಾರೆ. ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪರ ಮಾತಾಡಿರುವ ತಿಪ್ಪೇಸ್ವಾಮಿ , ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ತಾರೆ. ಶ್ರೀರಾಮುಲು ಸೋಲ್ತಾರೆ. ಬಾದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂದಿದ್ದ ಸುದೀಪ್ ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾಕೆ ಬಂದ್ರು ಎಂದು ಹರಿಹಾಯ್ದಿದ್ದಾರೆ.