ಕೋಟಿ ಕೋಟಿ ಕಮಾಯಿಯ ಸುಲ್ತಾನ್‍ನ ಕೆಲವೊಂದು ಸಿಲ್ಲಿ ಮಿಸ್ಟೇಕ್ಸ್..! ನಿರ್ದೇಶಕರೇ ಎಡವಿದ್ದೀರಿ!!!!!!

Date:

ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅನುಷ್ಕಾ ನಟಿಸಿದ ಸಿನಿಮಾ “ಸುಲ್ತಾನ್” ಜುಲೈ 6 ಕ್ಕೆ ಬಿಡುಗಡೆಯಾಗಿದ್ದು ಎಲ್ಲಾರಿಗೂ ತಿಳಿದ ವಿಚಾರ.ಆರಂಭದ 2 ದಿನ ಗಳಲ್ಲೇ ಸಿನಿಮಾ ಭರ್ಜರಿ 73 ಕೋಟಿ ಹಾಗೂ ಅಂತರಾಷ್ಟ್ರೀಯ ವ್ಯವಹಾರ 100 ಕೋಟಿ ಯನ್ನು ದಾಟಿತ್ತು.ಸಿನಿಮಾದಲ್ಲಿ ಸಲ್ಮಾನ್ ಹಾಗೂ ಅನುಷ್ಕಾ ರೆಸ್ಟ್ ಲರ್ ಪಾತ್ರವನ್ನು ತುಂಬಾ ಚೆನ್ನಾಗಿಯೇ ನಿಭಾಯಿಸಿದ್ರು. ಸುಲ್ತಾನ್ ಗೆ ಪ್ರೇಕ್ಷಕರ ಜೊತೆಯಲ್ಲೇ ಕ್ರಿಟಿಕ್ಸ್ ನವರಿಂದಲೂ ಒಂದು ಒಳ್ಳೆಯ ರೆಸ್ಪೋನ್ಸ್ ದೊರಕಿದೆ.ನಿರ್ದೇಶಕ ಆಲಿ ಅಬ್ಬಾಸ್ ಜಫ಼ರ್ ಸಿನಿಮಾವನ್ನು ಅದೆಷ್ಟು ಚೆನ್ನಾಗಿ ಹೊರತಂದ್ರೂ,ಅವರಿಗೆ ಗೊತ್ತೋ ಗೊತ್ತಿಲ್ಲ್ ದೆಯೋ ಅನೇಕ ತಪ್ಪುಗಳು ನಡೆದಿವೆ.ಅಂತಹವುಗಳಲ್ಲಿ ಮುಖ್ಯವಾಗಿ ಗೋಚರಿಸುವ 7 ತಪ್ಪುಗಳನ್ನು ನಿಮ್ಮ ಮುಂದಿಡುತ್ತೇವೆ.ನಿಮಗೇನನ್ನಿಸುತ್ತೋ ನೋಡಿ.

1.ಈ ಸೀನ್ ನಲ್ಲಿ ಸಲ್ಮಾನ್ ಕನ್ನಡಿ ಮುಂದೆ ನಿಂತಿದ್ದಾರೆ.ಆದ್ರೂ ಇದ್ರಲ್ಲಿ ಅವರ 2 ಲುಕ್ ಬೇರೆ ಬೇರೆಯಾಗಿದೆ ಎಂದು ಅನ್ನಿಸುತ್ತದೆ.ಮೊದಲಿನ ಚಿತ್ರದಲ್ಲಿ ಸ್ವಲ್ಪ ದಪ್ಪಗಿದ್ದು ನಂತರದ ಚಿತ್ರದಲ್ಲಿ ಸ್ವಲ್ಪ ಕಡಿಮೆ ದಪ್ಪಯಿದ್ದಂಗೆ ಕಾಣಿಸುತ್ತಾರೆ.

mistakes_in_sultan_146797

2.ಹಳ್ಳಿಯ ಸ್ಪೋರ್ಟ್ಸ್ ಅಕ್ಯಾಡಮಿಯಲ್ಲಿ ಸುಲ್ತಾನ್ (ಸಲ್ಮಾನ್) ಒಂದು ಮೂರ್ತಿಯ ಇನ್ಯಾಗುರೇಷನ್ ಮಾಡುತ್ತಾರೆ.ನಿಜ ಹೇಳ್ಬೇಕಂದ್ರೆ ಆ ಮೂರ್ತಿಯ ಹಾಗೂ ಸಲ್ಮಾನ್ ನ ಲುಕ್ ನಲ್ಲಿ ಸಾಕಷ್ಟು ಅಂತರವಿದೆ.ಇಬ್ಬರ ಮುಖದಲ್ಲೂ ಯಾವ ಸಾಮ್ಯತೆಯೂ ಕಾಣಿಸುತ್ತಿಲ್ಲ.

mistakes_in_sultan_2_1467

3.ರೆಸ್ಟ್ಲಿಂಗ್ ನಿಯಮಕ್ಕನುಗುಣವಾಗಿ ಯಾವುದೇ ಚೂಪಾದ ವಸ್ತುಗಳನ್ನು ಧರಿಸಿ ಹೋಗುವಂತಿಲ್ಲ.ಆದ್ರೆ ರಿಂಗ್ ಒಳಗೆ ಅನುಷ್ಕಾ ಕ್ಲಿಪ್ ಹಾಕಿ ರೆಸ್ಟ್ಲಿಂಗ್ ಮಾಡುವುದು ಕಾಣಿಸುತ್ತದೆ.ಯಾಕೆ??

31_577e520846362

 

4..ಬೆಳಗ್ಗೆ ಆಫೀಸಿಗೆ ಹೊರಡೊವಾಗ ಮೂರು ಮಕ್ಕಳನ್ನು ನೋಡಿ ಸುಲ್ತಾನ್ (ಸಲ್ಮಾನ್)ಅವರಿಗೆ ಲಿಫ಼್ಟ್ ಕೊಟ್ಟು,ಅದರ ಜೊತೆಗೆ ಅವರಿಗೆ ಕಬ್ಬಿನ ಹಾಲೂ ಕೊಡಿಸುತ್ತಾನೆ,ಅಷ್ಟೆ ಅಲ್ಲ ಅವರನ್ನು ವಾಪಸ್ ಅದೇ ಜಾಗಕ್ಕೆ ಕರೆದೊಯ್ದು ಬಿಡುತ್ತಾನೆ.ನಿಜಕ್ಕೂ ಇದೊಂದು ವಿಚಿತ್ರ ಸನ್ನಿವೇಶ ಅನ್ಸುತ್ತೆ.ಮಕ್ಕಳನ್ನು ಸ್ಕೂಲ್ ಗೆ ಡ್ರಾಪ್ ಮಾಡಬೇಕೆಂಬುದನ್ನು ಬಹುಶಃ ಡೈರೆಕ್ಟರ್ ಸಾಹೇಬರು ಮರೆತರೋ ಏನೋ??

sultan-mistake

5.ಮಧ್ಯಮ ವರ್ಗದ ಫ್ಯಾಮಿಲಿಗೆ ಸೇರಿದ ಸುಲ್ತಾನ್(ಸಲ್ಮಾನ್) ನೀಲಿ ಬಣ್ಣದ ಸ್ಕೂಟರ್ ನಲ್ಲಿ ಓಡಾಡುತ್ತಿರುತ್ತಾರೆ.ಆದ್ರೆ,ಅನುಷ್ಕಾಳನ್ನು ಪಟಾಯಿಸೋ ಬ್ಯುಸಿಯಲ್ಲಿರೋವಾಗ ಅವರ ಬಳಿ ಸ್ಕೂಟರ್ ಬದಲಾಗಿ ಬೈಕ್ ಇರುತ್ತದೆ!ಅವರು ಆ ಸಂದರ್ಭದಲ್ಲಿ ಬೈಕ್ ನಲ್ಲಿ ಓಡಾಡುತ್ತಾರೆ.ಸಿನಿಮಾದಲ್ಲೇಲ್ಲೂ ಇದರ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲವಲ್ಲ ಯಾಕೆ??

31_577e4fceb636a-1024x576

6.ಹಳ್ಳಿಯ ಒಂದು ದೃಶ್ಯದಲ್ಲಿ ಟ್ರ್ಯಾಕ್ಟರೊಂದು ಹೊಂಡದೊಳಗೆ ಹೂತು ಹೋಗುತ್ತದೆ.ಹೂತು ಹೋಗಿರೋ ಭಾರೀ ಗಾತ್ರದ ಆ ಟ್ರಾಕ್ಟರ್ ನ ಸುಲ್ತಾನ್(ಸಲ್ಮಾನ್)ಕೆಲವೇ ಸೆಕೆಂಡುಗಳಲ್ಲಿ ಮೇಲೆತ್ತುತ್ತಾರೆ.ಸಲ್ಮಾನ್ ಸಿನಿಮಾದಲ್ಲಿ ಸಾಕಷ್ಟು ಪವರ್ ಫುಲ್ ಸ್ಟಂಟ್ಸ್ ಹಾಗೂ ಭಾರೀ ಭಯಂಕರ ತೂಕದ ಸಾಮಾನನ್ನು ಎತ್ತುವುದು ಕಾಣಸಿಗುತ್ತದೆ.ಆದ್ರೆ ಚಿಟಿಕೆ ಹೊಡ್ಯೋಷ್ಟ್ರಲ್ಲಿ ಅಂತಹ ಭಾರೀ ಗಾತ್ರದ ಟ್ರ್ಯಾಕ್ಟರ್ ನ್ನು ಎತ್ತುವುದು ಸ್ವಲ್ಪ ನಕಲಿಯಂತೆ ತೋರುತ್ತದಲ್ಲವೇ???

collage-49

31_577e4ffa6b634-1024x576

7.ಸುಲ್ತಾನ್ ನ ಬ್ಯಾನರ್ ನಲ್ಲಿ ಇನ್ ಸ್ಟಾಗ್ರಾಂ ನ ಲೋಗೋ ನೀಲಿ ಬಣ್ಣದಲ್ಲಿ ಕಾಣಸಿಗುತ್ತದೆ.ಆದ್ರೆ,ನಿಜವಾಗಿಯೂ ಈ ಲೊಗೊ ಪಿಂಕ್ ಹಾಗೂ ಆರೆಂಜ್ ಬಣ್ಣದಾಗಿರುತ್ತದಲ್ಲವೇ???

mistakes_in_sultan_1_1467

  • ಸ್ವರ್ಣಲತ ಭಟ್

 

POPULAR  STORIES :

ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

 

 

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...