ಎಲ್ಲಾ ವಿಧದಲ್ಲೂ ಸುಲ್ತಾನ್ ಸಿನಿಮಾ ಯಶಸ್ಸನ್ನು ತಲಪಿಯಾಗಿದೆ,ಹಾಗೂ ಅನೇಕ ದಾಖಲೆಯನ್ನೂ ಬ್ರೇಕ್ ಮಾಡಿದ್ದಾಗಿದೆ. ಕೇವಲ 12 ದಿನಗಳಲ್ಲಿ ಸುಲ್ತಾನ್ 500 ಕೋಟಿ ಗಳಿಸಿರುವುದು ನಿಜಕ್ಕೂ ಒಂದು ಅದ್ಭುತ ವಿಷ್ಯವೇ ಸರಿ. ಆದ್ರೆ ಈ 500 ಕೋಟಿಯಲ್ಲಿ ಯಶ್ ರಾಜ್ ಫಿಲ್ಮ್ಸ್ ಮತ್ತು ಸಲ್ಮಾನ್ ಗಳಿಸಿರುವುದು ಎಷ್ಟೆಂದು ನಿಮಗೆ ಗೊತ್ತೇ???
ಸಲ್ಮಾನ್ ಹಾಗೂ ಯಶ್ ರಾಜ್ ಫಿಲ್ಮ್ಸ್ ತಲಾ 18 % ಅಂದರೆ 84 ಕೋಟಿ ಗಳಿಸಿದ್ದಾರೆ. ನಿಜಕ್ಕೂ ಭಾರೀ ಮೊತ್ತವೇ ತಾನೇ? ಆದ್ರೆ ಇದು ಕೇವಲ ರಫ್ ಕ್ಯಾಲ್ಕುಲೇಶನ್. ಹಾಗೂ ಇದರಲ್ಲಿ C.D ಹಾಗೂ D.V.D ಗಳ ಹಕ್ಕು ಮಾರಾಟ,ವೀಡಿಯೋ ಓನ್ ಡಿಮಾಂಡ್,ಡಿಜಿಟಲ್,ಮ್ಯೂಸಿಕ್ ಸ್ಯಾಟಲೈಟ್ ಎಲ್ಲಾವೂ ಸೇರಿವೆ.
ಸುಲ್ತಾನ ಸಿನಿಮಾ ಆದಾಯದ ಕ್ಯಾಲುಕುಲೇಶನ್ ನೋಡಬೇಕೇ??
ಒಟ್ಟು ಆದಾಯದ 500ಕೋಟಿಯಲ್ಲಿ, 106 ಕೋಟಿಯು ಎಂಟರ್ಟೈನ್ ಮೆಂಟ್ ಟ್ಯಾಕ್ಸ್ ಗೆ ಸಲ್ಲುತ್ತದೆ.ಇದು ನೇರ ರಾಜ್ಯಸರಕಾರಕ್ಕೆ ಸೇರುತ್ತದೆ ಹಾಗೂ ಈ ನಿಟ್ಟಿನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಟ್ಯಾಕ್ಸ್ ನ ದರದಲ್ಲಿ ವ್ಯತ್ಯಾಸವುಂಟಾಗುತ್ತದೆ.ಅದಿರ್ಲಿ ಬಿಡಿ!ಇಲ್ಲಿ ಆ 106 ಕೋಟಿಯನ್ನು ಮೈನಸ್ ಮಾಡಿದಲ್ಲಿ,ಉಳಿಯುವ ಕಲೆಕ್ಷನ್ ನ ಒಟ್ಟು ಮೊತ್ತ 394 ಕೋಟಿ ರೂಪಾಯಿಗಳು.
ಡಿಸ್ಟ್ರಿಬ್ಯೂಷನ್ ಕಾಸ್ಟ್
ಗಳಿಕೆಯಲ್ಲಿನ 10-20 % ಡಿಸ್ಟ್ರಿಬ್ಯೂಟರ್ ಗೆ ಸಲ್ಲುತ್ತದೆ(ಯಶ್ ರಾಜ್ ಫಿಲ್ಮ್ಸ್)ಅದಲ್ಲದೆ,ಸಲ್ಮಾನ್ ಖಾನ್ ನ ಸ್ಟಾರ್ ಪವರ್ ಹಾಗೂ ಸುಲ್ತಾನ್ ನ ಮೇಗಾ ಶೋ ವನ್ನಾಧರಿಸಿ,ಯಶ್ ರಾಜ್ 20% ಛಾರ್ಜ್ ಮಾಡಿದ್ದಾರೆ.ಆದ ಕಾರಣ 394 ಕೋಟಿಯಲ್ಲಿ,79 ಕೋಟಿ(20%) ಯು ಯಶ್ ರಾಜ್ ಗೆ ಸೇರಿತು.ಮತ್ತೆ ಆ 79 ಕೋಟಿಯಲ್ಲಿ,ಯಶ್ ರಾಜ್ ಸುಮಾರು 20 ಕೋಟಿಯನ್ನು ಜಾಹೀರಾತು ಹಾಗೂ ಸಿನಿಮಾ ಪ್ರಿಂಟ್ ಗಳಿಗೆ ಖರ್ಚು ಮಾಡಿದ್ದಾರೆ,ಆಗ ಯಶ್ ರಾಜ್ ಬಳಿ 59 ಕೋಟಿ ಉಳಿಯುತ್ತದೆ.ನಿರ್ಮಾಪಕರ ಆದಾಯವನ್ನು ಇದರಲ್ಲಿ ಗಣನೆಗೆ ತೆಗೆದಿಲ್ಲ.
79 ಕೋಟಿಯನ್ನು ಮೈನಸ್ ಮಾಡಿದಲ್ಲಿ ಅಲ್ಲಿ ಉಳಿಯುವುದು 315 ಕೋಟಿಗಳು.
ಎಕ್ಸಿಬಿಟರ್ ಕಾಸ್ಟ್
ಡಿಸ್ಟ್ರಿಬ್ಯೂಷನ್ ಕಾಸ್ಟ್ ನಂತರ,ಇನ್ನೂ ಹೆಚ್ಚಿನ ಮೊತ್ತ ಸಲ್ಲಬೇಕಾದ್ದು ಸಲ್ಮಾನ್ ನ ಎಕ್ಸಿಬಿಟರ್ ಗಳಿಗೆ.ಅಂದ್ರೆ ಅರ್ಥಾತ್ ಸಿನಿಮಾ ಹಾಲ್ ನ ಮಾಲೀಕರಿಗೆ.ಮೊದಲ ವಾರದಲ್ಲಿ ಗಳಿಸಿದ ಆದಾಯದಲ್ಲಿ 50% ನಿವ್ವಳ ಮೊತ್ತವನ್ನೂ,ಎರಡನೇ ವಾರದಲ್ಲಿ 45% ಮೊತ್ತವನ್ನು ಗಳಿಸಿದ್ದಾರೆ.ಅದಲ್ಲದೆ ನೆನಪಿಡಿ! ಈ ಮೊತ್ತವು,ಡಿಸ್ಟ್ರಿಬ್ಯೂಷನ್ ಕಾಸ್ಟ್ ಹಾಗೂ ಎಂಟರ್ಟೈನ್ ಮೆಂಟ್ ಟ್ಯಾಕ್ಸ್ ನ ಮೈನಸ್ ಮೊತ್ತವಾಗಿದೆ.ಹಾಗಾದಲ್ಲಿ ಮೇಲೆ ಉಳಿದಿರೋ 315 ಕೋಟಿಯಲ್ಲಿ ಎಕ್ಸಿಬಿಟರ್ ಕೇವಲ ಎರಡೇ ವಾರದಲ್ಲಿ 157 ಕೋಟಿ ಯನ್ನು ಬಾಚಿದ್ದಾರೆ
ಇನ್ನುಳಿದಿರೋ ವ್ಯವಹಾರಗಳೇನು ?
ಕಡೇಗೆ ಉಳಿದಿರೋದು ಕೇವಲ 158 ಕೋಟಿ!ಹಾಗಾದ್ರೆ ಇನ್ನು ನಿರ್ಮಾಪಕರ ಪ್ರೊಡಕ್ಷನ್ ಕಾಸ್ಟ್ (ಯಶ್ ರಾಜ್ ಫಿಲ್ಮ್ಸ್) 70 ಕೋಟಿಯನ್ನು ಕಳೆದಲ್ಲಿ ಉಳಿಯೋದು 88 ಕೋಟಿಗಳು.ಇದಲ್ಲದೆ ನಾನ್ ಥಿಯೇಟ್ರಿಕಲ್ ಮೊತ್ತವಾದ 20 ಕೋಟಿ ಆದಾಯವನ್ನೂ ಇದರಲ್ಲಿ ಸೇರಿಸಲಾಗುತ್ತದಂತೆ,ಅದು ಮೊತ್ತವನ್ನು 108 ಕೋಟಿಗೆ ಏರಿಸುತ್ತದೆ.
ಇನ್ನು ಈಗ ಮೇಲೆ ಹೇಳಿದ ಯಶ್ ರಾಜ್ ಗಳಿಕೆಯ 59 ಕೋಟಿಯನ್ನು ಇದಕ್ಕೆ ಸೇರಿಸಿದಾಗ,(ಡಿಸ್ಟ್ರಿಬ್ಯೂಷನ್ ಕಾಸ್ಟ್)ಯಶ್ ರಾಜ್ ನ ಒಟ್ಟು ಆದಾಯ 167 ಕೋಟಿ ರೂಪಾಯಿಗಳು.
ಇನ್ನೀಗ ನಮ್ಮ ಸುಲ್ತಾನ್ ಸಿನಿಮಾದ ಆ ಸುಲ್ತಾನನ ಆದಾಯ ಎಷ್ಟೆಂದು ನೋಡೋಣವೇ??
ದಾಖಲೆಗಳ ಪ್ರಕಾರ,ಸಲ್ಮಾನ್ ಯಶ್ ರಾಜ್ ಫಿಲ್ಮ್ಸ್ ಜೊತೆ 100 ಕೋಟಿ ಡೀಲನ್ನು,ಇಲ್ಲವಾದಲ್ಲಿ ನಿವ್ವಳ ಆದಾಯದ 50% ಮೊತ್ತವನ್ನು ಕೇಳಿದ್ದಾನಂತೆ ಎಂದು ಹೇಳಲಾಗುತ್ತಿದೆ.ಅಂದರೆ ಸಲ್ಮಾನ್ ಗೆ 50% ಡೀಲ್ ಆದಲ್ಲಿ ಇದು 83.5 ಕೋಟಿಯನ್ನು ಸಲ್ಮಾನ್ ನ ಪಾಲಿಗೆ ನೀಡುತ್ತದೆ.ಇದೊಂದು ಭಾರೀ ಮೊತ್ತವೇ ಸರಿ!
ಒಟ್ಟ್ ನಲ್ಲಿ ಡೀಲಪ್ಪೋ ಡೀಲು ಭಯಂಕರ ಡೀಲು !!!!!
- ಸ್ವರ್ಣಲತ ಭಟ್
POPULAR STORIES :
ಕಣ್ಣು ಕಾಣದಿದ್ದರೇನು ಗೆಳತಿ ನಾನಿಲ್ಲವೇ ನಿನ್ನ ಕಣ್ಣಾಗಿ…!
ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!
ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!
ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?