ಸುನಾಮಿ ಕಿಟ್ಟಿ ಮತ್ತು ಸ್ನೇಹಿತರ ಗಲಾಟೆ

Date:

ಕ್ಷುಲ್ಲಕ ಕಾರಣಕ್ಕೆ ಪಬ್ ನಲ್ಲಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತರು ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಶೋಕ್ ನಗರದಲ್ಲಿ ಇರುವ ಮಿರಾಜ್ ಪಬ್ ನಲ್ಲಿ ಜುಲೈ 24 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಪಕ್ಕದ ಟೇಬಲ್ ಮೇಲೆ ಶಾಂಪೇನ್ ಬಿದ್ದಿದ್ದಾನೆ.

ಈ ಸಂಬಂಧ ಶಿವಮೊಗ್ಗದ ಉದ್ಯಮಿ ಶ್ರೀನಿವಾಸ್ ಹಾಗೂ ಸ್ನೇಹಿತರು ಪ್ರಶ್ನೆ ಮಾಡಿದ್ದಕ್ಕೆ, ಕಿಟ್ಟಿ ಹಾಗೂ ಅವರ ಸ್ನೇಹಿತ ಚೇತನ್ ಗೌಡರಿಂದ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪಬ್ ಸಿಬ್ಬಂದಿ ಸಮಾಧಾನ ಮಾಡಿ ಪರಿಸ್ಥಿತಿ ಸುಧಾರಿಸಿದರು. ಈ ಸಂಬಂಧ ಕಿಟ್ಟಿ ಸ್ನೇಹಿತ ಚೇತನ್ ಗೌಡ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಶ್ರೀನಿವಾಸ್ ಅವರು ನಾನು ಶಿವಮೊಗ್ಗದ ರೌಡಿ ಎಂದು ಧಮ್ಕಿ ಹಾಕಿ, ಅವರ ಸ್ನೇಹಿತರಾದ ಪ್ರಶಾಂತ್ ಕಡೆಯವರು ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಸೂಕ್ತ ತನಿಖೆ ಕೈಗೊಳ್ಳುವಂತೆ ದೂರಿನಲ್ಲಿ ಚೇತನ್ ಗೌಡ ಉಲ್ಲೇಖಿಸಿದ್ದಾರೆ. ಇನ್ನೂ ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...