No menu items!
30.2 C
Munich
Thursday, July 16, 2026

ಬಿಬಿಎಂಪಿ ಚುನಾವಣೆ ಸಂಬಂಧ ಆರ್ ಅಶೋಕ್ ಹೇಳಿದ್ದೇನು ?

Must read

 

ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂ ಆದೇಶ ಪಾಲನೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಲು ಸರ್ಕಾರ ಸಿದ್ಧವಿದೆ. ತಕ್ಷಣ ಚುನಾವಣೆ ಘೋಷಣೆ ಮಾಡಲು ಯಾವುದೇ ತೊಂದರೆಯಿಲ್ಲ ಎಂದರು. ಇನ್ನೂ ಬಿಬಿಎಂಪಿ ಚುನಾವಣೆ ಮೀಸಲಾತಿ ಒಂದು ವಾರದಲ್ಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್​ ಸೂಚಿಸಿದೆ. ಸರ್ಕಾರ, ನಮ್ಮ ಪಕ್ಷ ಎರಡೂ ಚುನಾವಣೆಗೆ ತಯಾರಿ ಇದೆ.

 

ಚುನಾವಣೆ ಮಾಡಲು ಯಾವುದೇ ಭೀತಿ ಇಲ್ಲ. ಬೂತ್ ಮಟ್ಟದಲ್ಲಿ, ವಾರ್ಡ್ ಮಟ್ಟದಲ್ಲಿ ಸಭೆಗಳನ್ನ ಮಾಡಿದ್ದೇವೆ. ಚುನಾವಣೆ ತಯಾರಿ ಸಂಬಂಧ ನಾವೆಲ್ಲಾ ತಯಾರಿ ಮಾಡಿದ್ದೇವೆ. ಚುನಾವಣೆ ದಿನಾಂಕ ಎಲೆಕ್ಷನ್ ಕಮಿಷನ್ ನಿರ್ಧಾರ ಮಾಡಲಿದೆ. ಉಳಿದ ಕೆಲಸಗಳನ್ನು ಸರ್ಕಾರ ಮಾಡಲಿದೆ. ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಚರ್ಚಿಸಲು ಸಿಎಂ ಬಳಿ ಹೋಗ್ತೀವಿ ಎಂದು ತಿಳಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article