ದೀಪಾವಳಿ ಬಂದ್ರೆ ಸಾಕು ನೌಕರರಿಗೆ ಖಷಿಯೋ ಖಷಿ.. ತಿಂಗಳ ಸಂಭಳದ ಜೊತೆಗೆ ಅಷ್ಟೊ ಇಷ್ಟೋ ಬೋನಸ್ ಪಡೆದು ಸಡಗರದಿಂದ ದೀಪಾವಳಿ ಆಚರಿಸಿ ಕುಟುಂಬಸ್ಥರ ಜೊತೆ ಸಖತ್ ಖುಷಿಯಾಗಿರ್ತಾರೆ.. ಆದ್ರೆ ಸೂರತ್‍ನಲ್ಲಿರೋ ವಜ್ರದ ವ್ಯಾಪಾರಿ ಹರೆಕೃಷ್ಣ ಎಕ್ಸ್ ಪೋರ್ಟ್ ಮಾಲಿಕ ಸಾವ್ಜಿ ದೋಲಾಕಿಯಾ ಅವರು ತಮ್ಮ ನೌಕರರಿಗೆ ಸಖತ್ ಅಚ್ಚರಿಯ ಬೋನಸ್ ಕೊಡುಗೆ ನೀಡಿದ್ದಾರೆ ನೋಡಿ..! ಹರೆಕೃಷ್ಣ ಡೈಮಂಡ್ ಮತ್ತು ಟೆಕ್ಸ್ ಟೈಲ್ಸ್ ನಲ್ಲಿ ಕೆಲಸ ಮಾಡ್ತಾ ಇರೋ ನೌಕರರಿಗೆ 1,260 ಕಾರು ಹಾಗೂ 400 ಫ್ಲಾಟ್‍ಗಳ ದೀಪಾವಳಿ ಬೋಸಸ್ ನೀಡಿದ್ದಾರೆ. ಈ ಮೂಲಕ ಎಲ್ಲಾ ನೌಕರರಿಗೂ ದೀಪಾವಳಿ ಅಚ್ಚರಿಯ ಧಮಾಕ ಗಿಫ್ಟ್‍ನ್ನು ನೀಡಿದ್ದಾರೆ ನೋಡಿ..! ಪ್ರತೀ ವರ್ಷ ಈ ಸಂಸ್ಥೆ ದೀಪಾವಳಿ ಬೋನಸ್ ಆಗಿ ಸುಮಾರು 51 ಕೋಟಿ ಖರ್ಚು ಮಾಡ್ತಾ ಇದಾರೆ.. ಅಲ್ಲದೇ ಈ ಬಾರಿ ಕಂಪನಿ ಸುವರ್ಣ ಮಹೋತ್ಸವ ಆಚರಿಸುತ್ತಿರುವುದರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ದೀಪಾವಳಿ ಬೋನಸ್ ನೀಡಲು ಮುಂದಾಗಿದೆ.. ತಮ್ಮ ಸಂಸ್ಥೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ ಸುಮಾರು 1,716 ನೌಕರರು ಈ ಬಾರಿಯ ಬಿಗ್ ಬೋನಸ್ ತಮ್ಮದಾಗಿಸಿಕೊಂಡಿದ್ದಾರೆ.. ಈಗಾಗಲೇ ಈ ಬಾರಿ ಬೋನಸ್ ಪಡೆದ ನೌಕರರ ಹೆಸರನ್ನು ಕಳೆದ ಮಂಗಳವಾರ ಸಂಸ್ಥೆ ಅಧಿಕೃತ ಪಟ್ಟಿಯನ್ನು ಹೊರಹಾಕಿದ್ದಾರೆ. ಕಳೆದಬಾರಿಯೂ ಸಂಸ್ಥೆ ತಮ್ಮ ಅಧಿಕಾರಿಗಳಿಗೆ 200 ಫ್ಲಾಟ್ ಹಾಗೂ 491 ಕಾರು ಉಡುಗೊರೆ ನೀಡಿದ್ದರು.. ಆದರೆ ಈ ಬಾರಿ ಅದು ದ್ವಿಗಣ ಪ್ರಮಾಣದಲ್ಲಿ ನೀಡಲಾಗ್ತಾ ಇದೆ.. ಸುಮಾರು 5,500 ಕೆಲಸಗಾರರಿರುವ ಈ ಸಂಸ್ಥೆಯಲ್ಲಿ ವಾರ್ಷಿಕ ವಹಿವಾಟು 6000 ಕೋಟಿಗೂ ಅಧಿಕ ಎನ್ನಲಾಗ್ತಾ ಇದೆ. ಇನ್ನು ಈ ಬಾರಿ ಫ್ಲಾಟ್ ಉಡುಗೊರೆ ಪಡೆಯುವ 400 ನೌಕರರಿಗೆ ಮತ್ತೊಂದು ಉಡುಗೊರೆಯನ್ನು ನೀಡಿದ್ದಾರೆ.. ಅದೇನಂದ್ರೆ 400 ಫ್ಲಾಟ್ ಗಿಫ್ಟ್ ಪಡೆಯುವ ಎಲ್ಲರೂ ಫ್ಲಾಟ್‍ಗೆ ಡೌನ್ ಪೇಮೆಂಟ್ ಕಟ್ಟೋ ಹಾಗಿಲ್ಲ.. ಅದು ಸಂಸ್ಥೆಯೇ ಭರಿಸಿಕೊಳ್ಳುತ್ತೆ. ಅಲ್ಲದೇ ತಿಂಗಳಿಗೆ 5000 ಇನ್ಟಾಲ್‍ಮೆಂಟ್‍ನೂ ಕೂಡ ಕಂಪನಿಯೇ ನೋಡಿಕೊಳ್ಳುತ್ತೆ ನೋಡಿ.. ಅದೂ ಕೂಡ 5 ವರ್ಷಗಳ ಕಾಲ..
ದುಧಾಲಾ ಗ್ರಾಮದ ಸಾವ್ಜಿ ಪ್ರಾರಂಭದಲ್ಲಿ ವಜ್ರ ವ್ಯಾಪಾರಕ್ಕಾಗಿ ತಮ್ಮ ಚಿಕ್ಕಪ್ಪನ ಬಳಿ ಸಾಲ ಪಡೆದು ಈ ಮಟ್ಟಕ್ಕೆ ಬೆಳೆದಿದ್ದು ಎನ್ನುತ್ತಾರೆ.. ಹಣಕ್ಕೆ ಇವರು ನೀಡುವ ಗೌರವ ಎಷ್ಟರ ಮಟ್ಟಿಗೆ ಅಂದ್ರೆ ನಿಮ್ಗೆ ಈ ಸ್ಟೋರಿ ನೆನಪಿದಿಯೋ ಇಲ್ವೋ.. ವಿದೇಶದಲ್ಲಿ ವ್ಯಾಸಾಂಗ ಮಾಡ್ತಾ ಇದ್ದ ಮಗನಿಗೆ ಕೇರಳದ ಬಟ್ಟೆ ಅಂಗಡಿಯಲ್ಲಿ ಕೇವಲ 7000 ಸಂಬಳದ ಕೆಲಸಕ್ಕೆ ಕಳುಹಿಸಿದ್ದರು ನೋಡಿ..
Like us on Facebook The New India Times
POPULAR STORIES :
ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?