ಬಲಗಾಲಿಗೆ ಬದಲಾಗಿ ಎಡಗಾಲಿಗೆ ಶಸ್ತ್ರಚಿಕಿತ್ಸೆ-ಬೇಜವಾಬ್ದಾರಿ ಡಾಕ್ಟರ್

Date:

ದೆಹಲಿಯ ಶಾಲಿಮಾರ್ ಬಾಗ್ ನಲ್ಲಿರುವ ಪ್ರಖ್ಯಾತ ಆಸ್ಪತ್ರೆಗಳಲ್ಲೊಂದಾದ ಫೊರ್ಟಿಸ್ ಆಸ್ಪತ್ರೆಯಲ್ಲಿ ವೈದ್ಯರುಗಳು ಮಾಡಿರುವ ಅವಾಂತರದಿಂದ ರವಿ ರಾಯ್,(ವಯಸ್ಸು 24)ದೆಹಲಿಯ ಅಶೋಕ್ ವಿಹಾರ್ ನಿವಾಸಿ ಯ ಬಲಗಾಲಿಗೆ ಬದಲಾಗಿ ಎಡಗಾಲನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ.ರವಿಯವರು ತನ್ನ ಮನೆಯ ಮಹಡಿಯ ಮೆಟ್ಟಿಲಿನಿಂದ ಬಿದ್ದು ಏಟು ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಫೋರ್ಟಿಸ್ ನಲ್ಲಿ C.T scan ಮತ್ತು X-Ray ಗೊಳಪಡಿಸಲಾಯಿತು.ಆಮೇಲೆ ಇದರ ಆಧಾರದ ಮೇಲೆ ರವಿಯವರ ಬಲಕಾಲಿನ ಪಾದದ ಮೂಳೆ ಮುರಿತಕ್ಕೊಳಗಾಗಿದೆ ಎಂದೂ ಪರಿಸ್ಠಿತಿ ಗಂಭೀರವಾಗಿದ್ದು ಕೂಡಲೇ ಶಸ್ತ್ರ ಚಿಕಿತ್ಸೆ ಮಾಡಿ ಪಾದಕ್ಕೆ ಆಧಾರಕ್ಕೆ ಪಿನ್ ಹಾಕಬೇಕೆಂದೂ ಹೇಳಲಾಯಿತು.ಇದರಂತೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಶಸ್ತ್ರಚಿಕಿತ್ಸೆಗೂ ಒಳಪಡಿಸಲಾಯಿತು,ಆದ್ರೆ ಚಿಕಿತ್ಸೆಯ ನಂತರ ರವಿಯವರಿಗೆ ಪ್ರಜ್ನೆ ಬಂದಾಗಲೇ ಅರಿವಾದದ್ದು ಡಾಕ್ಟರ್ ಗಳ ಈ ಅಜಾಗರೂಕತೆ!ಪಾಪ! ರವಿಯವರ ಬಲಗಾಲಿಗೆ ಬದಲಾಗಿ ಚೆನ್ನಾಗಿದ್ದ ಎಡಕಾಲನ್ನೇ ಡಾಕ್ಟರ್ ಗಳು ಬೇಜವಾಬ್ದಾರಿಯಿಂದ ಮುರಿದು ಹಾಕಿದಂಗಾಯ್ತು ನೋಡಿ.

C.T scan ಮತ್ತು X-Ray ಎಲ್ಲಾ ಇದ್ದೂ ಈ ತಪ್ಪು ನಡೆದದ್ದು ಹೇಗೆ? ಇದಕ್ಕೆ ಯಾರು ಹೊಣೆ?ಚೆನ್ನಾಗಿದ್ದ ಕಾಲನ್ನೇ ರಿಪೇರಿ ಮಾಡಿದಂತಾಯ್ತಲ್ವೇ??ಇನ್ನೇನು ಮಾಡಿದ್ರೂ ರವಿಯ ಕಾಲು ಮೊದಲಿನಂತಾಗುವುದೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಫೊರ್ಟಿಸ್ ಆಸ್ಪತ್ರೆ ನೀಡಿದ ಉತ್ತರ” ರೋಗಿಗಳ ಸುರಕ್ಷತೆಯೇ ನಮಗೆ ತೀರ ಅಗತ್ಯ.ಈ ವಿಷಯದಲ್ಲಿ ನಮಗೆ ತುಂಬಾ ಬೇಸರವಿದೆ.ವಿಷಯವನ್ನು ಸೂಕ್ಷ್ಮವಾಗಿ ಪರೀಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ”ಎಂದಾಗಿತ್ತು.

ರವಿಯವರ ಮನೆಯವರು ನಮಗೆ ಪರಿಹಾರ ಬೇಡ ಇದರಲ್ಲಿ ನ್ಯಾಯ ಬೇಕು.ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.ಇದರ ಸಂಬಂಧ ಪೋಲಿಸ್ ರಿಗೆ ದೂರು ನೀಡಲಾಗಿದ್ದು,ಹೆಚ್ಚಿನ ನ್ಯಾಯಕ್ಕಾಗಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(MCI)ಹಾಗೂ ದೆಹಲಿ ಮೆಡಿಕಲ್ ಅಸ್ಸೋಸಿಏಷನ್ (DMA) ಗೆ ಮೊರೆ ಹೋಗಿದ್ದಾರೆ.ಡಾಕ್ಟರ್ ಗಳ ತೀರಾ ಬೇಜವಾಬ್ದಾರಿತನದ ಕೆಲಸ ಎಂದು ರವಿಯವರ ತಂದೆ ರಾಮಕರನ್ ರಾಯ್ ನೊಂದು ಹೇಳಿದರು.

ಛೀ ಛೀ! ಹೆಸರಾಂತ ಆಸ್ಪತ್ರೆಯ ಡಾಕ್ಟರ್ ಗಳೇ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸಿದ್ರೆ ಜನಸಾಮಾನ್ಯರ ಪಾಡೇನು?????

  • ಸ್ವರ್ಣಲತ ಭಟ್

POPULAR  STORIES :

ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!

ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?

ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?

ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!

ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!

ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ

ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ

ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!

ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!

68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...