ಕೊಲ್ಕತ್ತಾದ ದಾದಾ ಸೌರವ್ ಗಂಗೂಲಿ ಬಿಟ್ರೆ ಟೀಂ ಇಂಡಿಯಾದ ಅಪ್ರತಿಮ ಹಾಗೂ ಜವಾಬ್ದಾರಿಯುತ ಕ್ಯಾಪ್ಟನ್ ಅಂದ್ರೆ ಅದು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ. 2004ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಪಾದರ್ಪಣೆ ಮಾಡಿದ ಧೋನಿ ಅಲ್ಲಿಂದ ಇಲ್ಲಿಯವರೆಗೂ ಸಾಧನೆಯ ಶೀಖರವನ್ನೇರುತ್ತಲೆ ಬಂದಿದ್ದಾರೆ. ತಂಡದ ನಾಯಕ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ಟೀಂ ಇಂಡಿಯಾವನ್ನು ಅಗ್ರಸ್ಥಾನಕ್ಕೆ ಮುನ್ನಡಿಸಿದ್ದು ಬೇರ್ಯಾರೂ ಅಲ್ಲ ಇದೆ ಎಂ.ಎಸ್ ಧೋನಿ. ಮೂರು ವಿಭಾಗದಲ್ಲೂ ಚಾಂಪಿಯಯನ್ ಪಟ್ಟ ತಂದು ಕೊಟ್ಟ ವಿಶ್ವದ ಏಕೈಕ ಕ್ಯಾಪ್ಟನ್ ಎಂಬ ಖ್ಯಾತಿಗಳಿಸಿದ್ದ ಧೋನಿ ಈಗ ಎಲ್ಲರಿಗೂ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನೆನ್ನೆ ರಾತ್ರಿ 8.30ರ ಸುಮಾರಿಗೆ ಧೋನಿ ತನ್ನ ನಾಯಕತ್ವ ಸ್ಥಾನದಿಂದ ಕೆಳಗಿಳಿಯುದಾಗಿ ಹೇಳಿ ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ..! ಈ ನಿರ್ಧಾರದಿಂದ ಎಲ್ಲರಿಗೂ ಕಾಡ್ತಾ ಇರೋ ಪ್ರಶ್ನೆ ಒಂದೆ..! ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯೋಕೆ ಕಾರಣವಾದ್ರೂ ಏನು..? ಎಂದು. ಆದ್ರೆ ಅದಕ್ಕೆಲ್ಲಾ ಉತ್ತರ ಈಗ ಸ್ವತಃ ಧೊನಿ ಅವರೆ ಕೊಟ್ಟಿದ್ದಾರೆ ನೋಡಿ..! ಬುಧವಾರ ಕಾನ್ಪುರದಲ್ಲಿ ನಡೆದ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಸೋತ ಝಾರ್ಖಂಡ್‍ಗೆ ಮತ್ತೊಂದು ಶಾಕ್ ನೀಡಿದ್ರು ಧೋನಿ..! ಬಿಸಿಸಿಐಗೆ ತಾನು ಎಲ್ಲಾ ವಿಭಾಗದ ನಾಯಕತ್ವ ಸ್ಥಾನವನ್ನು ತೊರೆದು ಕೇವಲ ಆಟಗಾರನಾಗಿ ಇರಲು ನಿರ್ಧರಿಸಿದ್ದೇನೆ ಎಂದು ಹೇಳಿ ತಮ್ಮ ರಾಜಿನಾಮೆ ಪತ್ರವನ್ನು ಮಂಡಿಸಿದ್ರು. ಅಷ್ಟೆ ಅಲ್ಲ ನಿನ್ನೆ ತಮ್ಮ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ಇತರೆ ಸದಸ್ಯರಿಗೆ ಗೆಟ್ ಟುಗೆದರ್ ಪಾರ್ಟಿಯನ್ನೂ ಆಯೋಜಿಸಿದ್ರು. ಈ ವೇಳೆ ತಂಡದ ಸದಸ್ಯರು ಕೇಳಿದ ಪ್ರಶ್ನೆಗೆ ಧೋನಿ ಉತ್ತರ ನೀಡಿದ್ದು ಹೀಗೆ..
ಧೋನಿ ಕೊಟ್ಟ ಉತ್ತರ ಏನು..?
ಸೌರಭ್ ತಿವಾರಿ: ನೀವು ನಾಯಕ ಸ್ಥಾನಕ್ಕೆ ಯಾಕೆ ರಾಜಿನಾಮೆ ಕೊಟ್ರಿ..?
ಧೋನಿ: ನಾನು ಬಿಸಿಸಿಐಗೆ ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳೋಕು ಮುನ್ನ ಕ್ರಿಕೆಟ್‍ನ ಮೂರು ವಿಭಾಗಕ್ಕೂ ಒಬ್ಬರೆ ಕ್ಯಾಪ್ಟನ್ ಆಗಿರ್ಬೇಕು ಎಂದು ತಿಳಿಸಿದ್ದೆ. ಮುಂದೆ ನಡೆಯುವ ಟಿ20 ಹಾಗೂ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಒಬ್ಬನೆ ನಾಯಕನಾಗಿರುವ ಆಶಯ ನನ್ನದಾಗಿತ್ತು. ಹೀಗಾಗಿ ನಾನು ನಾಯಕತ್ವ ಸ್ಥಾನ ತ್ಯಜಿಸಿದೆ ಎಂದು ಉತ್ತರ ನೀಡಿದ್ದಾರೆ. ಮಂಡಳಿಯೂ ಅತಿ ಶೀಘ್ರದಲ್ಲಿ ಒಬ್ಬ ಹೊಸ ನಾಯಕನನ್ನು ಹುಡುಕಲಿ. ನಾನು ರಾಜಿನಾಮೆ ನೀಡದಿದ್ದರೆ ಸಮಸ್ಯೆ ಹಾಗೆ ಉಳಿಯುತ್ತಿತ್ತು ಎಂದಿದ್ದಾರೆ.
ಟೀಂ ಇಂಡಿಯಾ ಇನ್ನೊರ್ವ ಆಟಗಾರ.
ನೀವು ನಾಯಕತ್ವ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಬಾರದಿತ್ತು..!
ಧೋನಿ: ಇಲ್ಲ, ಇಲ್ಲ ನಾನು ಈ ನಿರ್ಧಾರ ಸೂಕ್ತ ಸಮಯದಲ್ಲೆ ತೆಗೆದುಕೊಂಡಿದ್ದೇನೆ. ಜೀವನದಲ್ಲಿ ಅನೇಕ ತಿರುವುಗಳು ಎದುರಾಗುತ್ತದೆ. ಆಗ ನಾವು ತಾಳ್ಮೆಯಿಂದಲೆ ನಿರ್ಧಾರ ತೆಗೆದುಕೊಳ್ಳಬೇಕು. ನನ್ನ ನಿರ್ಧಾರ ಶೇಕಡಾ ನೂರರಷ್ಟು ಸರಿ ಇದೆ ಎಂದು ಧೋನಿ ತಿಳಿಸಿದ್ದಾರೆ.
ಇನ್ನು ಸದಾ ಕೂಲ್ ಆಗಿ ಇರ್ತಿದ್ದ ಧೋನಿ ತನ್ನ ರಾಜಿನಾಮೆ ಪ್ರಕಟಿಸಿದ ಬಳಿಕವೂ ನಗುತ್ತಾ ಖುಷಿಯಾಗಿ ಇದ್ದರು. ಮುಖದಲ್ಲಿ ಯಾವುದೇ ದುಃಖ ಇರ್ಲಿಲ್ಲ. ತಾವು ಕೊಟ್ಟ ಗೆಟ್ ಟುಗೆದರ್ ಪಾರ್ಟಿಯಲ್ಲೂ ಕ್ಯಾಪ್ಟನ್ ಕೂಲ್ ಇತರೆ ಆಟಗಾರರ ಜೊತೆ ಸಂಭ್ರಮದಿಂದಲೆ ಆಚರಿಸಿಕೊಂಡಿದ್ದಾರೆ. ಆಟಗಾರರೊಂದಿಗೆ ಹಾಡು ಹೇಳುತ್ತಾ ಸೆಲ್ಫಿ ತಗೊಂಡು ಎಂಜಾಯ್ ಮಾಡ್ತಾ ಇದ್ರು ಅಂತ ಝಾರ್ಖಂಡ್ ರಣಜಿ ಕೋಚ್ ರಾಜೀವ್ ಕುಮಾರ್ ತಿಳಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?