ಹುಣಸಮಾರನಹಳ್ಳಿ ದಯಾನಂದ ಸ್ವಾಮಿ ಕಾಮಕಾಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸ್ವಾಮಿ ಕಾಮಪ್ರಸಂಗ ಬಯಲಾಗಿದ್ದು ಇದೇ ಮೊದಲಲ್ಲವಂತೆ..! ಹಿಂದಿಯೂ ಬಹಿರಂಗವಾಗಿತ್ತು ಎನ್ನಲಾಗಿದೆ..! ಅವತ್ತಿನ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿಗೆ ಸಿಡಿ ಸ್ಟೋರಿ ಗೊತ್ತಿತ್ತಂತೆ..! ಮಿರ್ಜಿ ಮುಂದಾಳತ್ವದಲ್ಲಿ ಸ್ವಾಮೀಜಿ ಹಾಗೂ ಹನಿಟ್ರ್ಯಾಪ್ ಮಾಡಿದವರ ನಡುವೆ ಸಂಧಾನ ನಡೆದಿತ್ತು ಎಂದು ಹೇಳಲಾಗ್ತಿದೆ..!
ಇನ್ನೊಂದು ಅಂಶವೆಂದರೆ ಸ್ವಾಮಿಯ ಕಾಮಲೀಲೆ ಹಿಂದೆ ಅವರ ಸಂಬಂಧಿಕರ ಪಿತರೂರಿ ಇದೆ. ಮಠದ ಆಸ್ತಿಯನ್ನು ಪಡೆಯುವ ಹುನ್ನಾರದಿಂದ ಮಲ್ಲಿಕಾರ್ಜುನ್, ಹಿಮಾಚಲ ಮತ್ತು ಚಂದ್ರು ಎಂಬುವವರು ಮಠದಲ್ಲೇ ಕೆಲಸ ಮಾಡ್ತಿದ್ದು, ಇವರುಗಳು ಮಠದ ಆಸ್ತಿ ಹೊಡೆಯಲು ಹನಿಟ್ರ್ಯಾಪ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೀಡಿಯೋ ಮೂಲಕ ಕೂಡ ಲಕ್ಷಗಟ್ಟಲೆ ಹಣ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಹುಣಸಮಾರನಹಳ್ಳಿ ಗ್ರಾಪಂ ಮಾಜಿ ಸದಸ್ಯ ರಾಮಣ್ಣ ಆರೋಪಿಸಿದ್ದಾರೆ..!