ನೋಟು ನಿಷೇಧದ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು ನೋಟ್ ಬ್ಯಾನ್ ಪರಿಣಾಮವಾಗಿ ಮೇಲಾಧಾರ ಹಾನಿ ಹಾಗೂ ಕೋಲಾಟರಲ್ ಡ್ಯಾಮೇಜ್ ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ..! 500 ಮತ್ತು 1000 ಮುಖಬೆಲೆಯ ನೋಟು ನಿಷೇಧ ಮಾಡಿದ ಪರಿಣಾಮ ಹಾನಿಯುಂಟಾಗಿದೆ ಎಂದು ಹೇಳಿರುವ ಸುಬ್ರಮಣಿಯನ್ ಸ್ವಾಮಿ ಇದಕ್ಕಾಗಿ ಪ್ರಧಾನಿ ಮೋದಿ ಅವರನ್ನು ದೂಷಿಸಿಲ್ಲ. ಬದಲಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ನೋಟು ನಿಷೇದ ಮಾಡಿರೋದು ಒಳ್ಳೆಯ ವಿಷಯವೇ ಆದರೆ ನೋಟು ನಿಷೇಧದ ಯೋಜನೆಯನ್ನು ವಿತ್ತ ಸಚಿವಾಲಯ ತೀರ ಕಳಪೆಯಾಗಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನೋಟು ನಿಷೇಧದ ಬೆನ್ನಲ್ಲೇ ತುರ್ತು ಅಥವಾ ಮುಂಜಾಗೃತಾ ಕ್ರಮಗಳನ್ನು ಕಂಡು ಕೊಂಡಿದ್ದರೆ ನೋಟು ನಿಷೇಧದ ಪರಿಣಾಮ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಯಶಸ್ವಿ ಕಾಣಬಹುದಿತ್ತು ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿದ್ದ ಕ್ರಮಕ್ಕೆ ಪೂರಕವಾಗಿ ನಾನು ಒಂದು ಸಲಹೆ ನೀಡಿದ್ದೆ. ಆದರೆ ಹಣಕಾಸು ಸಚಿವಾಲಯವನ್ನು ಅನಗತ್ಯವಾಗಿ ಬದಲಾವಣೆ ಮಾಡಿ ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಟ್ಟಂತಾಯಿತು ಎಂದು ಹೇಳಿರುವ ಸ್ವಾಮಿ, ಇತ್ತೀಚೆಗೆ ಐಟಿ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಅಧಿಕಾರಿಗಳನ್ನು ಕಪ್ಪು ಹಣವನ್ನು ಅಧಿಕೃತಗೊಳಿಸಲು ಸಹಕಾರಿಯಾಗಿದ್ದ ದಲ್ಲಾಳಿಗಳು ಎಂದು ಹೇಳಿದ್ದಾರೆ. ಇನ್ನು ನೋಟು ನಿಷೇಧದ ಬಳಿಕ ಅರುಣ್ ಜೇಟ್ಲಿ ಅವರು ಸೂಕ್ತ ಸಿದ್ದತೆ ನಡೆಸಿಲ್ಲ ಎಂದು ಆರೋಪಿಸುವ ಸುಬ್ರಮಣಿಯನ್ ಸ್ವಾಮಿ, ಎಟಿಎಂಗಳಲ್ಲಿ ಉದ್ದುದ್ದ ಸಾಲು ನಿಲ್ಲೋಕೆ ಮೂಲ ಕಾರಣಕರ್ತರು ಜೇಟ್ಲಿಯೇ ಹೊರತು ಪ್ರಧಾನಿ ಮೋದಿ ಅವರಲ್ಲ ಎಂದಿದ್ದಾರೆ ಪ್ರಧಾನಿ ಮೊದಿ ಅವರ ನಡೆ ನನಗೆ ತೃಪ್ತಿ ಇದೆ ಅದರೆ ಅರುಣ್ ಜೇಟ್ಲಿ ಅವರ ನಿರ್ವಹಣೆಯ ಕುರಿತು ನನಗೆ ತೃಪ್ತಿ ಇಲ್ಲ ಎಂದಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?
ಮರಣಕ್ಕೂ ಮುನ್ನ ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಸಲಹೆ ಏನು ಗೊತ್ತಾ..?
ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ
ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್
ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!
ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?