ತಮಿಳು ನಾಡಿನಲ್ಲಿ ಚಾಲಕರೊಬ್ಬರು ಹೆಲ್ಮೆಟ್ ಹಾಕೊಂಡು ಬಸ್ ಚಲಾಯಿಸಿದ್ದಾರೆ…!
ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿದ್ದ ಬಸ್‍ನ ಚಾಲಕ ಹೀಗೆ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದವರು. ಈ ಬಸ್ ಚಾಲಕನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ.
ತಮಿಳುನಾಡು ಸಾರಿಗೆ ಇಲಾಖೆ ಸಿಬ್ಬಂದಿ ನಾನಾ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದು, ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದಾಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಕೆಲಸಕ್ಕೆ ಹಾಜರಾದ ಡ್ರೈವರ್ ತಾನು ಇತರೆ ನೌಕರರ ಕೆಂಗಣ್ಣಿಗೆ ಗುರಿ ಆಗಬಾರದೆಂದು ಹೆಲ್ಮೆಟ್ ಧರಿಸಿದ್ದರು. ಚಾಲಕ ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಇವರ ಗುಣವನ್ನು ಪ್ರಯಾಣಿಕರು ಮೆಚ್ಚಿ ಕೃತಜ್ಞತೆ ಸಲ್ಲಿಸಿದ್ದಾರೆ.