ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅನೇಕ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಈಗ ‘ತಾಯಿಗೆ ತಕ್ಕ ಮಗ’ ಸಿನಿಮಾಕ್ಕೂ ಧ್ವನಿ ನೀಡಿದ್ದಾರೆ.
ಶಶಾಂಕ್ ನಿರ್ದೇಶನದ ಈ ಸಿನಿಮಾದ ಹೀರೋ ಅಜಯ್ ರಾವ್. ನಾಯಕಿ ಆಶಿಕಾ ರಂಗನಾಥನ್. ಕೃಷ್ಣ ಲೀಲಾ ಚಿತ್ರದ ಬಳಿಕ ಅಜಯ್ ರಾವ್ ಮತ್ತು ಶಶಾಂಕ್ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಇದೇ 31ರಂದು ಟ್ರೇಲರ್ ಬಿಡುಗಡೆ ಆಗಲಿದೆ.