ಈ ಲವ್‍ಗೆ ವಯಸ್ಸು, ಜಾತಿ,ಕುಲ ಯಾವ್ದೂ ಮ್ಯಾಟ್ರಗಲ್ಲ ಅಂತ ಹೇಳ್ತಾರೆ..! ಆದ್ರೆ ಲವ್ ಮಾಡಿ ಮದ್ವೆ ಆಗೋಕೆ ಒಂದ್ ಏಜು-ಗೀಜು ಅಂತ ಇರುತ್ತಲ್ಲಾ..? ಇಷ್ಟ ಆದ್ ಕೂಡ್ಲೆ ವಯಸ್ಸಲ್ಲದ ವಯಸ್ಸಲ್ಲಿ ಮದ್ವೆ ಆಗೋಕೆ ಆಗುತ್ತಾ..? ಇಲ್ಲೊಬ್ರು ಶಿಕ್ಷಕಿಗೆ ತನ್ನ ಸ್ಟೂಡೆಂಟ್ ಮೇಲೆ ಸಿಕ್ಕಾಪಟ್ಟೆ ಲವ್ ಆಗ್ಬಿಟ್ಟಿದೆ. ಮೇಡಂ ಅವ್ರಿಗೆ 28, ಇವ್ರ ಲವ್ವರ್‍ಗೆ 14 ವರ್ಷ..! ಬಾಲಪ್ರೇಮಿ ಮದ್ವೆ ವಯಸ್ಸಿಗೆ ಬರೋಕೆ ಒನ್ನೂ 7 ವರ್ಷ ಆಗುತ್ತೆ..! ಅಷ್ಟೊತ್ತಿಗೆ ಈ 28ರ ಟೀಚರ್‍ಗೆ 35, ಆಂಟಿ ಆಗೋ ವಯಸ್ಸಾಗಿರುತ್ತೆ..! ಏನಪ್ಪಾ ಮಾಡೋದು ಅಂತ ತಲೆಕೆಡಿಸಿಕೊಂಡ ಪಾಗಲ್ ಪ್ರೇಮಿ ಟೀಚರ್ ಮತ್ತಾಕೆಯ ಸ್ವೀಟ್ 14 ಲವ್ವರ್ ಓಡೋಗ ನಿರ್ಧಾರ ಮಾಡ್ತಾರೆ..! ಮುಂದೇನಾಯ್ತು ಗೊತ್ತಾ..?
ಇದು ತೆಲಂಗಾಣದಲ್ಲಿ ನಡೆದ ಘಟನೆ. ಈ ಹುಚ್ಚು ಪ್ರೇಮಿಗಳು ಹೈದರಾಬಾದ್ ಮೂಲದವರಂತೆ. ವಿದ್ಯಾರ್ಥಿ ಕರ್ನೂಲ್ ಜಿಲ್ಲೆಯ ಶಾಲೆಯೊಂದರಲ್ಲಿ 9ನೇ ಕ್ಲಾಸ್ ಓದ್ತಿದ್ನಂತೆ. 28ರ ಶಿಕ್ಷಕಿ ಸಮಾಜ ವಿಜ್ಞಾನ ಪಾಠ ಮಾಡ್ತಿದ್ರಂತೆ. ಶಾಲೇಲಿ ಪಾಠ ಮಾಡಿದ್ದು ಸಾಕಾಗಲ್ಲ ಅಂ ವಿದ್ಯಾರ್ಥಿಯ ಮನೆಗೆ ಬಂದೂ ಪಾಠ ಹೇಳಿಕೊಡ್ತಿದ್ರಂತೆ (ಟ್ಯೂಶನ್)..! ಹೀಗೆ ‘ಪಾಠ’ ಜಾಸ್ತಿ ಆಗಿ…ಇಬ್ಬರ ನಡುವೆ ಲವ್ ಆಗ್ಬಿಡ್ತಂತೆ..! ಲವ್ ಯರ್ರಾಬಿರ್ರಿ ಹೆಚ್ಚಾಗಿ ಓಡಿ ಹೋದ್ರು. ಹೋಗುವಾಗ ಈ ಬಾಲ್ಯಪ್ರೇಮಿ ಮನೆಯಿಂದ 14 ಸಾವಿರ ರೂ ಕದ್ಕೊಂಡು ಹೋಗಿದ್ನಂತೆ..! ಈತನ ಪೋಷಕರು ಮಿಸ್ ಆಗ್ವನೆ ಮಗರಾಯ ಅಂತ ಹೈದರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೆಹಲಿ ರೈಲಿನಲ್ಲಿ ಪ್ರಯಾಣಿಸ್ತಾ ಇರುವಾಗ ಭೂಪಾಲ್ ಪೊಲೀಸರಿಗೆ ಸಿಕ್ಕಿ ಬಿದ್ದು ಬಂಧನಕ್ಕೊಳಗಾಗಿದ್ದಾರೆ..! ಪೊಲೀಸ್ರು ಇಬ್ಬರ ಕುಟುಂಬಕ್ಕೂ ಮಾಹಿತಿ ನೀಡಿದ್ದಾರೆ. ಲವ್ ಮ್ಯಾಟ್ರು ಪೊಲೀಸ್ ಸ್ಟೇಷನ್ ತಂಕ ಹೋಗಿದೆ..!