ಭಾರತೀಯ ಕ್ರಿಕೆಟ್ ಕೋಚ್ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲೆಲ್ಲೂ ಚರ್ಚೆ ಕೇಳಿಬರುತ್ತಿದೆ.ಯಾರಾಗಬಹುದು ಈ ಸಾರಿ ನಮ್ಮ ತಂಡದ ಕೋಚ್?ಇದಕ್ಕಾಗಿ ಈಗಾಗಲೇ ಅನಿಲ್ ಕುಂಬ್ಳೆ,ರವಿಶಾಸ್ತ್ರಿ,ಸಂದೀಪ್ ಪಾಟೀಲ್ ಹಾಗೂ ಇತರ ಕೆಲವರ ಸಂದರ್ಶನವು ನಡೆಯಲಿದ್ದು ಬೋರ್ಡ್ ಆಫ್ ಕಂಟ್ರೊಲ್ ಫಾರ್ ಕ್ರಿಕೆಟ್ ಇನ್ ಇಂಡಿಯ(BCCI) ವು 51 ಅರ್ಜಿಗಳಲ್ಲಿ 21 ಅರ್ಜಿಯನ್ನು ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆ ಮಾಡಿದೆ
ಇಲ್ಲಿ ಅನಿಲ್ ಕುಂಬ್ಳೆ ಹಾಗೂ ಉಳಿದ ಪ್ರಮುಖ ವ್ಯಕ್ತಿಗಳು ಬಿ.ಸಿ.ಸಿ.ಐ ಯ ಕೆಲವೊಂದು ಷರತ್ತುಗಳಿಗೆ ಪೂರಕವಾಗಿಲ್ಲ – ಇವರುಗಳು ಕ್ರಿಕೆಟ್ಗೆ ಸಂಬಂಧಿಸಿದ ಯಾವ ಪರೀಕ್ಷೆಯನ್ನೂ ಪಾಸು ಮಾಡಿಲ್ಲ ಹಾಗೂ ಯಾವ ದೇಶೀಯ ಅಥವಾ ಅಂತರಾಷ್ಟ್ರೀಯ ಟೀಮ್ ಗೆ ಕೋಚ್ ಆಗಿ ಕೆಲಸ ಮಾಡಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟಲ್ಲಿ ಕ್ರಿಕೆಟ್ ಅಡ್ವೈಸರೀ ಕಮಿಟೀ(CAC) ಗೆ ಬಿ.ಸಿ.ಸಿ.ಐ ಯು ಆಯ್ಕೆಯಾಗಿ ಉಳಿದ 21 ಜನರಲ್ಲಿ ಯಾರನ್ನಾದರೂ ಸಂದರ್ಶನಕ್ಕೆ ಕೊನೇಯದಾಗಿ ಆಯ್ಕೆಮಾಡುವ ಹಕ್ಕನ್ನು ನೀಡಿದೆ.
ಕುಂಬ್ಳೆಯು ಸಿ.ಎ.ಸಿಯ ಉನ್ನತ ಸ್ಥಾನದಲ್ಲಿರುವ ಸಚಿನ್ ತೆಂಡುಲ್ಕರ್,ಗಂಗೂಲಿ ಮತ್ತು ವಿ.ವಿ.ಎಸ್ ಲಕ್ಶ್ಮಣ್ ನ್ನು ಸಂದರ್ಶನದಲ್ಲಿ ಎದುರಿಸಲಿದ್ದಾರೆ.ಈ ಮೂವರು ಕುಂಬ್ಳೆ ಜೊತೆ ಟೀಮ್ ನಲ್ಲಿ ಜೊತೆಗಾರರಾಗಿದ್ದ ಕಾರಣ ದಿಂದಲೂ ತೀರ್ಮಾನವು ಕುಂಬ್ಳೆ ಪರವಾಗುವ ಶಿಫಾರಸುಗಳೂ ನಡೆಯಬಹುದು ಎಂದು ಹೇಳಲಾಗುತ್ತದೆ.ಆದ್ರೂ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳೊ ಮುನ್ನ ಭಾರತದ ಕ್ರಿಕೆಟ್ ಟೀಮ್ ನ ಕೆಲವೊಂದು ಸೀನಿಯರ್ ಆಟಗಾರರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಕಮಿಟಿಯು ತಿಳಿಸಿದೆ.ರವಿ ಶಾಸ್ತ್ರಿಯು ಮುಂದಿನ ಕೋಚ್ ಆಗಬಹುದೆಂಬ ಊಹಾ ಪೋಹಗಳಿವೆ ಯಾಕಂದ್ರೆ ಇವರಿಗೆ ಭಾರತೀಯ ಎಲ್ಲಾ ಆಟಗಾರರ ಜೊತೆ ಒಳ್ಳೆಯ ಸಂಬಂಧವಿದೆ.
ಬಿ.ಸಿ.ಸಿ.ಐ ಕಾರ್ಯದರ್ಶಿಯಾಗಿರುವ ಅನುರಾಗ್ ಠಾಕೂರ್ ಸಿ.ಎ.ಸಿ.ಯ ಶಿಫಾರಸುಗಳಿಗೆ ಬದ್ದವಾಗಿರುತ್ತಾರೆ.ಅಂತೂ ಸಿ.ಎ.ಸಿಗೆ ತನ್ನ ನಿರ್ಧಾರವನ್ನು ಕೊನೇಯದಾಗಿ ಬಿ.ಸಿ.ಸಿ.ಐ ಗೆ ರವಾನೆ ಮಾಡಲು ಜೂನ್ 24 ರ ತನಕ ಕಾಲಾವಕಾಶವಿದೆ.ಕೋಚ್ ಯಾರಾಗುತ್ತಾರೋ ಕಾದು ನೋಡೊಣ.
- ಸ್ವರ್ಣಲತ ಭಟ್
POPULAR STORIES :
ಅಡುಗೆ ಮನೆಯಲ್ಲಿ ಅಡಗಿಸಿಟ್ಟ ಔಷಧಿಗಳು..!!
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ
ನಿಮಗೂ ಸೆಲ್ಫೀ ಕ್ರೇಝ್ ಇದ್ಯಾ…? ಹಾಗಿದ್ರೆ ಎಚ್ಚರ
ಮಾತಿಲ್ಲದೆ ಮಾತನಾಡೋ ಪುಷ್ಪಕ ವಿಮಾನ..!
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!