ದೇವಸ್ಥಾನಗಳು ಬಂದ್ : ಚಾಮುಂಡೇಶ್ವರಿಯ ಅರ್ಚಕರು ಹೇಳಿದ್ದೇನು ?

0
64

ದೀಪಾವಳಿ ಅಮಾವಾಸ್ಯೆಯಂದೇ ಕೇತುಗ್ರಸ್ಥ ಸೂರ್ಯ ಗ್ರಹಣ ಗೋಚರಿಸುತ್ತಿದೆ. 27 ವರ್ಷಗಳ ಬಳಿಕ ದೀಪಾವಳಿ ಅಮಾವಾಸ್ಯೆಯಂದೇ ಸಂಭವಿಸ್ತಿರುವ ಗ್ರಹಣ ಕರ್ನಾಟಕ ಸೇರಿ ಭಾರತದಾದ್ಯಂತ ಗೋಚರಿಸಲಿದೆ. ಹೀಗಾಗಿ ಸೂರ್ಯ ಗ್ರಹಣದ ಸಮಯದಲ್ಲಿ ಚಾಮುಂಡಿಬೆಟ್ಟದ ದೇವಾಲಯವನ್ನು ಬಂದ್ ಮಾಡಲಾಗುವುದು. ಈ ಬಗ್ಗೆ ಮಾತನಾಡಿದ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಗ್ರಹಣ ಕಾಲ ಅಂದ್ರೆ ಸೂತಕದ ರೀತಿ. ಹೀಗಾಗಿ ಗ್ರಹಣದ ವೇಳೆ ದೇವಾಲಯಕ್ಕೆ ಭಕ್ತರ ಪ್ರವೇಶ‌ವನ್ನ ನಿರ್ಬಂಧಿಸಲಾಗಿದೆ. ಸೂರ್ಯ ಗ್ರಹಣ ಸ್ಪರ್ಶ ಕಾಲದಲ್ಲಿ ವಿಶೇಷ ಪೂಜೆ ಮಾಡಲಾಗುತ್ತೆ.
ಇನ್ನ ಸೂರ್ಯ ಗ್ರಹಣ ನಂತರ ದೇಗುಲದಲ್ಲಿ ಶುಚಿ ಕಾರ್ಯ ನಡೆಸಿ, ವಿಶೇಷ ಹೋಮ, ಅಭಿಷೇಕ ಮಾಡಲಾಗುವುದು ಎಂದು ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದ್ರು.

LEAVE A REPLY

Please enter your comment!
Please enter your name here