ಸೂರ್ಯ ಗ್ರಹಣ ಹಿನ್ನೆಲೆ ನಾಳೆ ಪ್ರಮುಖ ದೇಗುಲಗಳು ಬಂದ್ ಆಗಲಿವೆ. ಮೈಸೂರಿನ ಪ್ರಮುಖ ದೇಗುಲಗಳಲ್ಲಿ ಭಕ್ತರ ಪ್ರವೇಶವನ್ನ ನಿರ್ಬಂಧಿಸಲಾಗಿದ್ದು, ಚಾಮುಂಡಿಬೆಟ್ಟದಲ್ಲಿ ನಾಳೆ ಮಧ್ಯಾಹ್ನ ತನಕ ದೇವರ ದರ್ಶನಕ್ಕೆ ಅವಕಾಶವಿದೆ.
ಧಾರ್ಮಿಕ ಕಾರ್ಯ ನೆರವೇರಿಸಿ ಸೂರ್ಯ ಗ್ರಹಣದ ಸಮಯದಲ್ಲಿ ಚಾಮುಂಡಿ ದೇಗುಲವನ್ನು ಬಂದ್ ಮಾಡಲಾಗುವುದು. ಸೂರ್ಯ ಗ್ರಹಣ ನಂತರ ದೇವಾಲಯದಲ್ಲಿ ಸಂಪೂರ್ಣ ಶುಚಿ ಕಾರ್ಯ ನಡೆಯಲಿದ್ದು, ನಂತರ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮತ್ತು ಅಭಿಷೇಕವನ್ನು ನೆರವೇರಿಸಲಾಗುವುದು.