ಹಾಸನಾಂಬೆ ಮುಂದೆ ಶಾಸಕರ ಹೈಡ್ರಾಮಾ : ಪ್ರೀತಂಗೌಡ ವಿರುದ್ದ ಆಕ್ರೋಶ

Must read

ಹಾಸನಾಂಭೆ ದೇವಸ್ಥಾನದ ಮುಂದೆ ನಿನ್ನೆ ಸಖತ್ ಹೈಡ್ರಾಮಾ ನಡೆದಿದೆ . ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಮೈಸೂರಿನ ಚಾಮರಾಜ ಕ್ಷೇತ್ರದ ಸ್ವಪಕ್ಷೀಯ ಶಾಸಕ ನಾಗೇಂದ್ರ ಕೆಂಡಾಮಂಡಲರಾದ ಘಟನೆ ನಡೆದಿದೆ , ” ನಿಮ್ಮ ಶಾಸಕನ ದವಲತ್ತು ಹೆಚ್ಚು ದಿನ ನಡೆಯಲ್ಲ ರೀ, ನನಗೂ ಗೊತ್ತಿದೆ.. ” ಎಂದು ಕಿಡಿಕಾರಿದ್ದು , ಹಾಸನಾಂಬೆ ದೇವಾಲಯದಿಂದ ತೆರಳಿದ ಘಟನೆ ಭಾನುವಾರ ನಡೆದಿದೆ.

ಹಾಸನಾಂಬೆಯ ದರ್ಶನದ 11ನೇ ದಿನ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಸುಮಾರು ಒಂದರಿಂದ ಎರಡು ಲಕ್ಷ ಮಂದಿ ದರ್ಶನ ಪಡೆದಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ತಮ್ಮ ಕುಟುಂಬ ಸಮೇತ ದರ್ಶನಕ್ಕೆ ಬಂದ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆ ಆಕ್ರೋಶಗೊಂಡ ಅವರು ಸ್ಥಳೀಯ ಶಾಸಕ ಪ್ರೀತಂ ಗೌಡಗೆ ಮೊಬೈಲ್ ಕರೆ ಮಾಡಿದ್ದಾರೆ. ಒಂದಲ್ಲ.. ಎರಡಲ್ಲ ಅನೇಕ ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಿದ ಹಿನ್ನೆಲೆ ನಾಗೇಂದ್ರ ಆಕ್ರೋಶಗೊಂಡಿದ್ದಾರೆ. ಕುಟುಂಬ ಸಮೇತ ಬಂದ ತಮಗೆ ಅಪಮಾನ ಮಾಡಿದ ಶಾಸಕರ ಮೇಲೆ ಕೆಂಡಾಮಂಡಲವಾಗಿ, ಕೂಗಾಡಿ ವಾಪಸ್ ಮೈಸೂರಿಗೆ ತೆರಳಿದ್ದಾರೆ.

- Advertisement -spot_img

More articles

- Advertisement -spot_img

Latest article