ಟೆಸ್ಟ್ ರ್ಯಾಂಕಿಂಗ್ – ಟಾಪ್‌ 10 ರಲ್ಲಿ ಮೂವರು ಭಾರತೀಯರು

Date:

ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿರುವ ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿ ಗಟ್ಟಿಯಾಗಿದ್ದಾರೆ. ಆದರೆ ಟೆಸ್ಟ್ ಸ್ಪೆಷಾಲಿಸ್ಟ್, ಗ್ರೇಟ್ ವಾಲ್-2 ಎಂದು ಕರೆಯಲ್ಪಡುತ್ತಿರುವ ಚೇತೇಶ್ವರ ಪೂಜಾರ 6ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ನೂತನ ಟೆಸ್ಟ್ ರ್‍ಯಾಂಕಿಂಗ್‌ನ ಬ್ಯಾಟಿಂಗ್‌ ವಿಭಾಗದಲ್ಲಿ ಒಟ್ಟು 3 ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ.

10ನೇ ಶ್ರೇಯಾಂಕದೊಳಗೆ ಸ್ಥಾನ ಪಡೆದುಕೊಂಡ ಭಾರತೀಯರೆಂದರೆ; 4ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (862), 6ನೇ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಮತ್ತು 8ನೇ ಸ್ಥಾನದಲ್ಲಿ ಭಾರತದ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ. ಮುಂಬರಲಿರುವ ಇಂಗ್ಲೆಂಡ್-ಭಾರತ ಸರಣಿಯಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದರೆ ರ್‍ಯಾಂಕಿಂಗ್‌ನಲ್ಲಿ ಮತ್ತೆ ಸುಧಾರಣೆ ಕಾಣಲು ಅವಕಾಶವಿದೆ.

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿರುವ ಆಟಗಾರರ, ತಂಡಗಳ ಇಣುಕುನೋಟ ಕೆಳಗಿನಂತಿದೆ.

ಭಾರತದ ಚೇತೇಶ್ವರ ಪೂಜಾರ 5ನೇ ಸ್ಥಾನದಿಂದ 6ಕ್ಕೆ ಜಿಗಿದಿದ್ದರೆ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಕ್ರಮವಾಗಿ 13 ಮತ್ತು 18ನೇ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್ ಬ್ಯಾಟಿಂಗ್‌ ರ್ಯಾಂಕಿಂಗ್ ಅಗ್ರಸ್ಥಾನದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಇದ್ದಾರೆ. ತಂಡಗಳಲ್ಲಿ 1. ನ್ಯೂಜಿಲೆಂಡ್, 2. ಭಾರತ, 3. ಆಸ್ಟ್ರೇಲಿಯಾ, 4. ಇಂಗ್ಲೆಂಡ್, 5. ದಕ್ಷಿಣ ಆಫ್ರಿಕಾ ತಂಡಗಳಿವೆ.

ಬ್ಯಾಟಿಂಗ್

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್, 919 ರೇಟಿಂಗ್ ಪಾಯಿಂಟ್ಸ್‌), 2. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 891), 3. ಮಾರ್ನಸ್ ಲ್ಯಬುಶೇನ್ (ಆಸ್ಟ್ರೇಲಿಯಾ, 878), 4. ವಿರಾಟ್ ಕೊಹ್ಲಿ (ಭಾರತ), 5. ಜೋ ರೂಟ್ (ಇಂಗ್ಲೆಂಡ್), 6. ಚೇತೇಶ್ವರ್ ಪೂಜಾರ (ಭಾರತ), 7. ಬಾಬರ್ ಅಝಾಮ್ (ಪಾಕಿಸ್ತಾನ), 8. ಅಜಿಂಕ್ಯ ರಹಾನೆ (ಭಾರತ), 9. ಹೆನ್ರಿ ನಿಕೋಲ್ಸ್ (ನ್ಯೂಜಿಲೆಂಡ್), 10. ಬೆನ್ ಸ್ಟೋಕ್ಸ್ (ಇಂಗ್ಲೆಂಡ್).

ಬೌಲಿಂಗ್

ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ, 908), 2. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್, 839), 3. ನೀಲ್ ವ್ಯಾಗ್ನರ್ (ನ್ಯೂಜಿಲೆಂಡ್, 825), 4. ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ), 5. ಟಿಮ್ ಸೌಥೀ (ನ್ಯೂಜಿಲೆಂಡ್), 6. ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್), 7. ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), 8. ರವಿಚಂದ್ರನ್ ಅಶ್ವಿನ್ (ಭಾರತ), 9. ಜಸ್‌ಪ್ರೀತ್‌ ಬೂಮ್ರಾ (ಭಾರತ), 10. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್).

ಆಲ್ ರೌಂಡರ್

ಬೆನ್ ಸ್ಟೋಕ್ಸ್ (ಇಂಗ್ಲೆಂಡ್, 427), 2. ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್, 123), 3. ರವೀಂದ್ರ ಜಡೇಜಾ (ಭಾರತ, 419), 4. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), 5. ಕೈಲ್ ಜೇಮಿಸನ್ (ನ್ಯೂಜಿಲೆಂಡ್), 6. ರವಿಚಂದ್ರನ್ ಅಶ್ವಿನ್ (ಭಾರತ), 7. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 8. ಕಾಲಿನ್ ಡೆ ಗ್ರ್ಯಾಂಡ್‌ಹೋಮ್ (ನ್ಯೂಜಿಲೆಂಡ್), 9. ಕ್ರಿಸ್ ವೋಕ್ಸ್ (ಇಂಗ್ಲೆಂಡ್), 10. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ).

Share post:

Subscribe

spot_imgspot_img

Popular

More like this
Related

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....