No menu items!
16.8 C
Munich
Thursday, July 23, 2026

ರಾಬರ್ಟ್ ತೆಲುಗು ಸಮಸ್ಯೆ ಬಗ್ಗೆ ಸುದೀಪ್ ಹೇಳಿದ್ದೇನು ಗೊತ್ತಾ?

Must read

ದರ್ಶನ್ ಅಭಿನಯದ ರಾಬರ್ಟ್ ತೆಲುಗು ಸಿನಿಮಾ ಬಿಡುಗಡೆಗೆ ತೆಲುಗು ರಾಜ್ಯಗಳಲ್ಲಿ ವಿತರಕರುಗಳಿಂದ ಅಡ್ಡಿಯುಂಟಾಗಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ರಾಬರ್ಟ್ ಚಿತ್ರತಂಡ ತೆಲುಗು ವಿತರಕನ ಈ ನಡೆ ವಿರುದ್ಧ  ಫಿಲ್ಮ್ ಚೇಂಬರ್ ನಲ್ಲಿ ದೂರು ಸಲ್ಲಿಸಿತ್ತು.

 

ಹೀಗೆ ವಿತರಕನ ನಡೆಯ ವಿರುದ್ಧ ಚಿತ್ರತಂಡ ತಿರುಗಿಬಿದ್ದ ನಂತರ ಆ ವಿತರಕ ರಾಬರ್ಟ್ ತೆಲುಗು ಚಿತ್ರವನ್ನ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾನೆ. ಇನ್ನು ಈ ವಿವಾದದ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

ತಮ್ಮ ಹಳೆಯ ಗೆಳೆಯ ದರ್ಶನ್ ಅವರ ರಾಬರ್ಟ್ ತೆಲುಗು ವಿವಾದದ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ಅವರು ನಾನು ಬೇರೆ ಸಿನಿಮಾದ ಸಮಸ್ಯೆಯನ್ನು ಇತ್ಯರ್ಥ ಮಾಡುವಷ್ಟು ದೊಡ್ಡ ಕಲಾವಿದನಲ್ಲ , ಅವರವರ ಸಿನಿಮಾವನ್ನು ಕಾಪಾಡಿ ಕೊಳ್ಳುವ ಶಕ್ತಿಯನ್ನು ದೇವರು ಅವರವರಿಗೆ ಕೊಟ್ಟಿದ್ದಾನೆ ಎಂದು ರಾಬರ್ಟ್ ತೆಲುಗು ವಿವಾದದ ಕುರಿತು ಸುದೀಪ್ ಅವರು ಪ್ರತಿಕ್ರಿಯೆ ನೀಡಿದರು. ಈ ಮೂಲಕ ಸುದೀಪ್ ಅವರು ಬೇರೆಯವರ ಚಿತ್ರಕ್ಕೆ ನಾನು ತಲೆ ಹಾಕುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು..

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article