ಸೌತ್ ಇಂಡಿಯಾದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾದ ನಟಿ ತಮನ್ನಾ.. ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ತಮನ್ನಾ ತಮ್ಮ ಬ್ಯೂಟಿಯಿಂದಲೇ ಎಲ್ಲರ ಮನಗೆದ್ದ ನಟಿ ಇವರು. ಈ ಬಹುಭಾಷಾ ನಟಿ ಬೆಳಗ್ಗಿದ್ದಾರೆ ಹಾಗೂ ಹಾಲು ಬಣ್ಣ ಹೊಂದಿದ್ದಾರೆ ಎಂದು ಬಹಳಷ್ಟು ಮಂದಿ ಈಕೆಯನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಆದರೆ ಇದ್ದಕ್ಕಿದ್ದಂತೆ ತಮನ್ನಾ ಇನ್ಮುಂದೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ ಎಂದಿದ್ದಾರೆ. ಹೀಗೆ ಕರೆದರೆ ಕೋಪ ಬರುತ್ತೆ ಅಂತೆ.. ಇದಕ್ಕೆ ಕಾರಣ..?
ಸದ್ಯಕ್ಕೆ ಕೆಜಿಎಫ್ ಚಿತ್ರದಲ್ಲಿ ಜೋಕೆ ಹಾಡಿನಲ್ಲಿ ಕಾಣಿಸಿಕೊಂಡಿರುವ ತಮನ್ನಾ ಸಂದರ್ಶನಯೊಂದರಲ್ಲಿ ಈ ರೀತಿ ಹೇಳಿದ್ದಾರೆ. ಚರ್ಮದ ಆಧಾರದ ಮೇಲೆ ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ. ಆ ರೀತಿ ಕರೆದರೆ ನನಗೆ ಕೋಪ ಬರುತ್ತದೆ. ಬಣ್ಣದ ಆಧಾರದ ಮೇಲೆ ಯಾರನ್ನು ಅಳೆಯಬಾರದು. ಚಿತ್ರರಂಗದಲ್ಲಿ ಈಗ ಇದು ಜಾಸ್ತಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ನಟಿ ತಮನ್ನಾ ಅವರಿಗೆ ಮಿಲ್ಕಿ ಬ್ಯೂಟಿ ಅಂದ್ರೆ ಕೋಪ ಬರುತ್ತೆ ಅಂತೆ… ಕಾರಣ?
Date: