ಸೂಪರ್ ಹೀರೋಗಳ ಬಗ್ಗೆ ಮಾತೆತ್ತಿದಾಗ ಥಟ್ಟನೆ ನೆನಪಿಗೆ ಬರುವುದು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ನಮ್ಮ ದೇಶದ ಕ್ರಿಶ್, ರೋಬೋ ರಜನಿಕಾಂತ್, ಶಕ್ತಿಮ್ಯಾನ್ ಗಳು. ಅವರು ನಾವು ಬಯಸಿದ್ದನ್ನು ಬುಲೆಟ್ ಟ್ರೇನ್ ವೇಗದಲ್ಲಿ ಮಾಡಿ ತೋರಿಸಿಬಿಡುತ್ತಾರೆ. ಅದೇ ಕಾರಣಕ್ಕೆ ಅವರಿಗೆ ಅಭಿಮಾನಿಗಳ ಮನದ ಮೂಲೆಯಲ್ಲಿ ಒಂದು ಚಿಕ್ಕ ಸ್ಥಾನ ಸದಾ ಮೀಸಲಾಗಿರುತ್ತದೆ. ಎಷ್ಟೇ ಆದರೂ ಅವರು ರೀಲ್ ಹೀರೋಗಳು. ಅವರನ್ನು ತೆರೆ ಮೇಲೆ ನೋಡಲು ಮಾತ್ರ ಚೆಂದ. ಆದರೆ ಇಲ್ಲೊಬ್ಬ ರಿಯಲ್ ಲೈಫ್ ಹೀರೋ… ಅವನ ಹೆಸರು ಬೆನ್ ಅಂತ.
ಬೆನ್ ಅಂಡರ್ವುಡ್.. ಈ 16 ವರ್ಷದ ಹುಡುಗನಿಂದ ಕಲಿಯುವುದು ತುಂಬಾನೆ ಇದೆ. ಇಷ್ಟಕ್ಕೂ ಈ ನತದೃಷ್ಟನಿಗೆ ಕಣ್ಣಿರಲಿಲ್ಲ. ಚಿಕ್ಕಂದಿನಲ್ಲಿ ಬಂದ ಕ್ಯಾನ್ಸರ್ ಇವನ ಕಣ್ಣನ್ನು ಕಿತ್ತುಕೊಂಡು ಕತ್ತಲ ಲೋಕಕ್ಕೆ ನೂಕಿತ್ತು. ಆದರೆ ಬೆನ್ನಿಗೆ ಯಾವುದೇ ಅಂಜಿಕೆಯಿಲ್ಲ. ಯಾರ ಭಯವೂ ಇಲ್ಲ. ಪ್ರತಿಯೊಬ್ಬರ ಜೊತೆಗೂ ನಗು ನಗುತ್ತಾ, ಆಟವಾಡುತ್ತಾ ಇರಬೇಕು ಎಂದು ಬಯಸಿದ್ದ.
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಬೆನ್ ಗೆ ದೇವರು ಒಂದು ಅದ್ಭುತ ಶಕ್ತಿ ಕೊಟ್ಟಿದ್ದ. ಅದೇ ಅವನ ಕಿವಿಗಳು. ಅವುಗಳ ಸಹಾಯದಿಂದ ಬಾಸ್ಕೇಟ್ ಬಾಲ್ ಆಡುತ್ತಿದ್ದ. ಯಾರ ಸಹಾಯವೂ ಇಲ್ಲದೇ ಲಂಡನ್ ನ ಗಿಜಿಗಿಜಿ ಎನ್ನುತ್ತಿದ್ದ ರೋಡ್ ಗಳನ್ನು ಕ್ರಾಸ್ ಮಾಡಿ, ಕಣ್ಣಿರುವವರಿಗೆ ಅಚ್ಚರಿ ಮೂಡಿಸುತ್ತಿದ್ದ. ಸೈಕಲ್ ರೈಡಿಂಗ್ನಲ್ಲೂ ಅಷ್ಟೇ ಕಣ್ಣಿರುವವರನ್ನೂ ಒಂದು ಕ್ಷಣದಲ್ಲಿ ಮೀರಿಸಿಬಿಡಬಲ್ಲ ತಾಕತ್ತು ಇವನಿಗಿತ್ತು. ಇನ್ನು ನೀರಿಗಿಳಿದರೆ ಮೀನುಗಳೇ ಇವನ ಮುಂದೆ ಮಂಡಿಯೂರುತ್ತಿದ್ದವು. ಶಾರ್ಕ್ ಗಳು ಗೆಳೆತನ ಬೆಸೆಯುತ್ತಿದ್ದವು. ಆದ್ದರಿಂದ ಇವನು ವೈದ್ಯ ಲೋಕದ ಎದುರು ದೊಡ್ಡ ಅಚ್ಚರಿಯಾಗಿ ನಿಂತಿದ್ದ. ಏಕೆಂದರೆ ಕಣ್ಣಿಲ್ಲದೇ ಹೇಗೆ ಈತ ತನ್ನ ಕೆಲಸಗಳನ್ನು ಯಾವುದೇ ಸಹಾಯವಿಲ್ಲದೇ ಮಾಡಿಕೊಳ್ಳುತ್ತಾನೆ ಎಂಬುದೇ ಈ ಅಚ್ಚರಿಗೆ ಕಾರಣವಾಗಿತ್ತು.
ಹಲವು ಬಾರಿ ಈತನನ್ನು ಟೆಸ್ಟ್ ಗೆ ಒಳಪಡಿಸಲಾಗಿತ್ತು. ಅದರಲ್ಲಿ ಬೆನ್ ಕುರುಡ ಎಂಬುದನ್ನು ಪದೇ ಪದೇ ಹೇಳುತ್ತಿತ್ತು. ಆದರೂ ಕೂಡಾ ಬೆನ್ ಎಲ್ಲರ ಪಾಲಿಗೆ ಆದರ್ಶಪ್ರಾಯನಾಗಿದ್ದ, ಕಣ್ಣಿಲ್ಲದವರ ಪಾಲಿನ ರೋಲ್ ಮಾಡೆಲ್ ಎನಿಸಿದ್ದ. ಕ್ಯಾನ್ಸರ್ ಬಂದವರ ಪಾಲಿಗೆ ಹೋರಾಟದ ಶಕ್ತಿಯಾಗಿದ್ದ. ಸಾಮಾನ್ಯ ಮನುಷ್ಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದ.
ಆದರೆ, ಅದು 2009 ಜನೇವರಿ. ಅಂದು ದೇವರ ಇಚ್ಛೆಯೇ ಬೇರೆಯಾಗಿತ್ತು. ಇದ್ದಕ್ಕಿದ್ದಂತೆ ಕುಸಿದುಬಿದ್ದ ಬೆನ್ ಮತ್ತೇ ಮೇಲೇಳಲೇ ಇಲ್ಲ. ಕ್ಯಾನ್ಸರ್ ಎಂಬ ಮಹಾಮಾರಿ ಅವನನ್ನು ಬಲಿ ಪಡೆದಿತ್ತು. ಕಣ್ಣಿದ್ದರೂ ಕುರುಡರಂತಿರುವ ಜನರಿಗೆ ಪಾಠ ಕಲಿಸಿದ್ದ ಬೆನ್ ಅಂದು ಮರೆಯಾಗಿದ್ದ. ಅಂದು ಇಂಗ್ಲೆಂಡ್ ಸೇರಿದಂತೆ ವಿಶ್ವದಲ್ಲೆಲ್ಲಾ ಬೆನ್ನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಲಾಗಿತ್ತು. “ವೀ ಮಿಸ್ ಯೂ ಬೆನ್” ಎಂದು ಉದ್ಘರಿಸಿತ್ತು.
- ರಾಜಶೇಖರ ಜೆ
POPULAR STORIES :
ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?
ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!
ಸಿಹಿ ಚಹಾದ ಹಿಂದಿನ ಕಹಿ ಸತ್ಯ…!
ಪ್ರೀತಿ ಇದ್ರೆ ಅನುಮಾನ ಬೇಡ.. ಅನುಮಾನ ಇದ್ರೆ ಪ್ರೀತಿ ಬೇಡ್ವೇ ಬೇಡ..!
ಜೀತದಾಳಾಗಿದ್ದವ ಇವತ್ತು ಡಾಕ್ಟರ್..!
ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..!
ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..
ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!
ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com