ತೃತೀಯ ಲಿಂಗಿಗಳ 2014ರ ಆದೇಶವನ್ನು ಮಾರ್ಪಡಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದ್ದಲ್ಲದೇ ಸಮಾಜದಲ್ಲಿ ಪುರುಷ-ಸ್ತ್ರೀ ಸಲಿಂಗಿಗಳು, ದ್ವಿಲಿಂಗಿಗಳನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಎನ್.ವಿ. ರಮಣ ಏಪ್ರಿಲ್ 15,2014ರ ಆದೇಶವನ್ನು ಎತ್ತಿಹಿಡಿದಿದ್ದು, ಪುರುಷ, ಸ್ತ್ರೀ ಸಲಿಂಗಿಗಳು (ಲೆಸ್‍ಬಿಯನ್ಸ್, ಗೇಯ್ಸ್) ಮತ್ತು ದ್ವಿಲಿಂಗಿಗಳು(ಬೈಸೆಕ್ಸೂಯಲ್ಸ್) ತೃತೀಯ ಲಿಂಗಿಗಳಲ್ಲ ಎಂದು ಆದೇಶ ನೀಡಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‍ಜಿ) ಮನೀಂದರ್ ಸಿಂಗ್ ಕೇಂದ್ರದ ಪರವಾಗಿ ಹಿಂದಿನ ಸುಪ್ರೀಂ ಕೋರ್ಟ್‍ನ ಆದೇಶದಲ್ಲಿ ಪುರುಷ, ಸ್ತ್ರೀ ಸಲಿಂಗಿಗಳು ಮತ್ತು ದ್ವಿಲಿಂಗಿಗಳು ತೃತೀಯ ಲಿಂಗಿಗಳೇ ಎಂಬುದನ್ನು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇದರ ಕುರಿತಾಗಿ ಹೆಚ್ಚಿನ ಸ್ಪಷ್ಟನೆಯನ್ನು ನೀಡಬೇಕು ಎಂದು ಕೋರಿದ್ದರು.
ಇದೇ ವೇಳೆಯಲ್ಲಿ ಕೆಲ ತೃತೀಯ ಲಿಂಗಿಗಳ ಕಾರ್ಯಕರ್ತರ ಪರ ಹಿರಿಯ ವಕೀಲ ಆನಂದ್ ಗ್ರೋವರ್ ಕೂಡ ಕೇಂದ್ರ ಸರಕಾರ 2014ರ ಸುಪ್ರೀಂ ಕೋರ್ಟ್ನ್ ಆದೇಶವನ್ನೇ ಕಳೆದ ಎರಡು ವರ್ಷಗಳಿಂದ ಪಾಲಿಸುತ್ತಾ ಬಂದಿದೆ ಹೀಗಾಗಿ ಹೆಚ್ಚಿನ ಸ್ಪಷ್ಟನೆಯ ಅಗತ್ಯವಿದೆ ಎಂದು ತಿಳಿಸಿದ್ದರು.
ಮಹತ್ವದ ಆದೇಶದಲ್ಲಿ ಏಪ್ರಿಲ್ 15,2015ರಂದು ಸುಪ್ರೀಂ ಕೋರ್ಟ್ ಎಲ್ಲ ಲಿಂಗಾಂತರಿಗಳಿಗೆ ತೃತೀಯ ಲಿಂಗಿಗಳೆಂದು ಪರಿಗಣಿಸಿದ್ದಲ್ಲದೇ, ಎಲ್ಲ ರಾಜ್ಯ ಸರಕಾರಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಇವರನ್ನು ಸಮಾನವಾಗಿ ಕಾಣುವುದಲ್ಲದೇ, ಎಲ್ಲ ಶೈಕ್ಷಣಿಕ ಸಂಸ್ಥೆ ಮತ್ತು ಸಾರ್ವಜನಿಕ ನೇಮಕಾತಿಗಳಲ್ಲಿ ಇವರಿಗೆ ಮೀಸಲು ಒದಗಿಸಬೇಕು ಎಂದು ಆದೇಶಿಸಿತ್ತು.
ಇದರಿಂದ ತೃತೀಯ ಲಿಂಗಿಗಳು ಸಮಾಜದಲ್ಲಿ ತಲೆಎತ್ತಿ ನಡೆಯುವುದಲ್ಲದೇ, ಅವರಿಗಿರುವ ಭಯ, ನಾಚಿಕೆ, ಸಾಮಾಜಿಕ ಒತ್ತಡ, ಖಿನ್ನತೆ ಮತ್ತು ಸಾಮಾಜಿಕ ಕಳಂಕವನ್ನು ಹೋಗಲಾಡಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇದಲ್ಲದೇ, ಪೆÇಲೀಸರು ಇವರ ವಿರುದ್ಧ ಐಪಿಸಿ ಸೆಕ್ಷನ್ 377 ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ತೃತೀಯ ಲಿಂಗಿಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತೀರಾ ಕಳಪೆ ಮಟ್ಟದಲ್ಲಿದೆ ಎಂದು ತಿಳಿಸಿತ್ತು. ಆದರೆ, ಕೇಂದ್ರ ಸರಕಾರ ಸೆಪ್ಟೆಂಬರ್ 2014ರಲ್ಲಿ ಸುಪ್ರೀಂಕೋರ್ಟ್‍ನ ಆದೇಶವನ್ನು ಪ್ರಶ್ನಿಸಿ ಅಪೆಕ್ಸ್ ಕೋರ್ಟ್‍ನ ಮೊರೆ ಹೋಗಿದ್ದಲ್ಲದೇ, ತೃತೀಯ ಲಿಂಗಿಗಳ ವ್ಯಾಖ್ಯಾನದಲ್ಲಿ ಪುರುಷ-ಸ್ತ್ರೀ ಸಲಿಂಗಕಾಮಿಗಳು ಮತ್ತು ದ್ವಿಲಿಂಗಿಗಳು ಬರುವುದಿಲ್ಲ. ಹೀಗಾಗಿ ಇವರನ್ನು ತೃತೀಯ ಲಿಂಗಿಗಳ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಲಿಂಗಾಂತರಿಗಳೆಂದರೆ ಯಾರು ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಗುರುವಾರ ಈ ಗೊಂದಲಗಳಿಗೆ ತೆರೆ ಎಳೆದಿದ್ದು, ಸಮಾಜದಲ್ಲಿ ಪುರುಷ-ಸ್ತ್ರೀ ಸಲಿಂಗಿಗಳು, ದ್ವಿಲಿಂಗಿಗಳನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
- ವಿಶು
POPULAR STORIES :
ಸೆಲ್ಫಿ ಹುಚ್ಚು ಹೆಚ್ಚಾಯ್ತು..! ಅತ್ಯಾಚಾರ ಸಂತ್ರಸ್ತೆ ಜೊತೆ ಸೆಲ್ಫಿ ತೆಗೆದುಕೊಂಡ್ಲು ಮಹಿಳಾ ಆಯೋಗದ ಸದಸ್ಸೆ..!
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!
ಜೈಲ್ ನಿಂದಲೇ IIT ಪರೀಕ್ಷೆ ಬರೆದು ಪಾಸಾದ ಈ ಹುಡುಗನ ಬಗ್ಗೆ ಗೊತ್ತೇ??
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?