ನವರಾತ್ರಿ, ಮಹಾನವಮಿ ಅಂದ್ರೆ ತಟ್ಟನೆ ನೆನಪಿಗೆ ಬರೋದು “ಹುಲಿವೇಷ”..! ಕರಾವಳಿ ಜಿಲ್ಲೆಗಳಲ್ಲಂತೂ ತುಂಬಾನೇ ಪ್ರಸಿದ್ಧಿ ಪಡೆದಿರುವ ಜಾನಪದ ಕಲೆ.! ಈ ಹುಲಿವೇಷದಾರಿಗೆ ಮೈ ತುಂಬಾ ಬಣ್ಣ ಬಳಿದು ವೇಷ ಹಾಕಲು ಬರೊಬ್ಬರಿ ಮೂರುಗಂಟೆಗಳ ಕಾಲ ಬೇಕಂತೆ..! ಹುಲಿವೇಷ ಧರಿಸಿದ ಕಲಾವಿದನ ನರ್ತನವನ್ನು ಕಣ್ಣಾರೇ ನೋಡಿಯೇ ಆನಂದಿಸಬೇಕು..! ಇಂದು ಜಾನಾಪದ ಕಲೆಗಳು ನಶಿಸುತ್ತಿವೆ..! ಈ ಕಾಲಘಟ್ಟದಲ್ಲಿ ಇಂತಹ ಕಲೆಗಳಿಗೆ ಪ್ರೋತ್ಸಾಹ.. ಕಲಾವಿದರಿಗೆ ಉತ್ತೇಜನ ನೀಡಲೇ ಬೇಕಾಗಿದೆ..! ಈ ಜಾನಾಪದ ಕಲೆಗಳು ದೇಶದ ಸಂಸ್ಕೃತಿಯೂ, ಪ್ರಾದೇಶಿಕ ಸಂಸ್ಕೃತಿಯೂ ಆಗಿದೆ..! ಇಂತಹ ಜಾನಪದಕಲೆಗಳಲ್ಲಿ “ಹುಲಿ ವೇಷ” ಅದ್ಭುತವಾದ ಜಾನಪದ ಸಂಸ್ಕೃತಿ. ಇಂದು ಈ ಕಲಾಪ್ರಕಾರವೂ ಕೂಡ ಕಣ್ಮರೆಯಾಗುತ್ತಿದೆ..! ಕೆಲವೊಂದು ಕಲಾತಂಡಗಳು ಇಂತಹ ಕಲೆಗೆಳಿಗೆ ಪ್ರೋತ್ಸಾಹ ನೀಡಿ ಬೆಳೆಸುತ್ತಿರುವುದೂ ಹೆಮ್ಮೆಯ ಸಂಗತಿಯೇ ಸರಿ..!
ಯುವಕರು, ಇಂದಿನ ಮಕ್ಕಳಲ್ಲಿ ಜಾನಪದ ಕಲೆಯ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ.. ಕೆಲವು ಮಕ್ಕಳು ಇಂದಿಗೂ ಆ ಕಡೆ ಒಲವು ಹೊಂದಿದ್ದಾರೆ..! ಈ ವೀಡೀಯೋನೇ ಅದಕ್ಕೆ ಸಾಕ್ಷಿ..! “ಹುಲಿವೇಷ” ಅಂದ್ರೆ ಸಾಕು ಅಮ್ಮನ ಸೆರಗಲ್ಲಿ ಮರೆಯಾಗಿ, ಪಿಳಿ ಪಿಳಿ ಕಣ್ಣನ್ನು ಮಿಟುಕಿಸುತ್ತಾ ಆ.. ಹುಲಿಯ ವೇಷಧಾರಿಯ ಕುಣಿತ ನೋಡುತ್ತಿರೋ ಮಕ್ಕಳೇ ಹೆಚ್ಚು..! ಅದು ವಯೋ ಸಹಜ ಭಯವೂ ಹೌದು..! ಆದ್ರೆ ಇಲ್ಲೊಬ್ಬಳು ಪುಟ್ಟ ಬಾಲಕಿ ವೃತ್ತಿಪರ ಹುಲಿವೇಷ ಕಲಾವಿದರಿಗೇ ಸೆಡ್ಡು ಹೊಡೆಯುತ್ತಾ.. ಹುಲಿಕುಣಿತ ಮಾಡ್ತಾ ಇದ್ದಾಳೆ..! ಅವಳ ಸ್ಟೆಪ್ ನೋಡಿ ನೀವು ಮೂಕವಿಸ್ಮಿತರಾಗಿಯೇ ಆಗುತ್ತೀರಿ,..! ನಾವಂತೂ ಬೆರಗಾಗಿ ಹೋದೆವು..! ಅಬ್ಬಾ..,! ಪುಟ್ಟಿ, ನೀ ದೊಡ್ಡ ಕಲಾವಿದೇ ಆಗ್ತೀಯಾ ಕಣೇ..! ಆಲ್ ದಿ ಬೆಸ್ಟ್.. ಯು ಆರ್ ರಿಯಲ್ಲೀ ಗ್ರೇಟ್ ಕಣೇ.
https://www.youtube.com/watch?v=S3D_9Jhf2Ug
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com