‘ಸೇನಾಧಿಕಾರಿ’ ತಿಲಕ್ ಗೆ ಹುಟ್ಟುಹಬ್ಬದ ಸಂಭ್ರಮ

Date:

ಉಗ್ರಂ, ಕರ್ವ ಖ್ಯಾತಿಯ ನಟ ತಿಲಕ್ ಶೇಖರ್ ಸೇನಾಧಿಕಾರಿ ಆಗುತ್ತಿದ್ದಾರೆ…! ಈ‌‌ ಮೂಲಕ ಹೊಸ ಗೆಟಪ್ ನಲ್ಲಿ ಅಭಿಮಾನಿಗಳ ಎದುರು ಬರಲು ಸಿದ್ಧರಾಗಿತ್ತಿದ್ದಾರೆ.


ಹೌದು, ತಿಲಕ್ ಅವರು ಹೊಸ ಚಿತ್ರವೊಂದರಲ್ಲಿ ಸೇನಾಧಿಕಾರಿ ಪಾತ್ರದಲ್ಲಿ ಮಿಂಚುತ್ತಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ನಲ್ಲಿ ಪ್ರಮುಖಪಾತ್ರದಲ್ಲಿ ನಟಿಸಿರುವ ತಿಲಕ್ ಹೊಸಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ.


ಸದಾ ವಿಭಿನ್ನ ಪಾತ್ರದಲ್ಲಿ ನಟಿಸುವ ತಿಲಕ್ , ಪಾತ್ರಯಾವುದೇ ಇರಲಿ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಇದೀಗ ಇಷ್ಟುದಿನ ಕಾಣದ ಪಾತ್ರದಲ್ಲಿ ನಟಿಸಲು ನಿರ್ಧರಿಸಿದ್ದು, ಸೇನಾಧಿಕಾರಿಯಾಗಿ ಸದ್ದು ಮಾಡಲಿದ್ದಾರೆ.


ತಮಿಳುನಾಡಿನ‌ ತಂಡವೊಂದು‌ ಚಿತ್ರದ ನಿರ್ಮಾಣಕ್ಕೆ ಮುಂದಾಗಿದೆ. ನಿರ್ದೇಶಕರು ಯಾರೆಂದು ತಿಳಿದುಬಂದಿಲ್ಲ.
ಈ ಚಿತ್ರದಲ್ಲಿ ಸೈನ್ಸ್ ಫಿಕ್ಷನ್ ಅಂಶಗಳು ಹೆಚ್ಚಿವೆಯಂತೆ. 1984ರಲ್ಲಿ ತೆರೆಕಂಡ ಮಲಯಾಳಂನ ‘ಪೂಚಕೊರು ಮೂಕುತಿ’ ಚಿತ್ರದ ಶೀರ್ಷಿಕೆಯಿಂದ ಸ್ಪೂರ್ತಿ ಪಡೆದು ಚಿತ್ರಕ್ಕೆ ಸದ್ಯ ‘ಬೆಕ್ಕಿಗೊಂದು ಮೂಗೂತಿ’ ಎಂದು ಹೆಸರಿಡಲಾಗಿದೆ.‌ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದ್ದು‌,‌‌ಮೊದಲು ಕನ್ನಡದಲ್ಲಿ ತೆರೆಕಾಣಲಿದೆ.


ಅಂದಹಾಗೆ ಸೇನಾಧಿಕಾರಿ ತಿಲಕ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ‌.‌ ದೊಡ್ಡಮಟ್ಟಿನ‌ ಯಶಸ್ಸು ಅವರದ್ದಾಗಲಿ ಎಂದು ಹಾರೈಸೋಣ.

Share post:

Subscribe

spot_imgspot_img

Popular

More like this
Related

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ

ಬಿಗ್ ಬಾಸ್ ಮನೆಗೆ ಬೀಗ: ಹೈಕೋರ್ಟ್ ಮೊರೆ ಹೋದ ಜಾಲಿವುಡ್ ಸ್ಟುಡಿಯೋ ಬೆಂಗಳೂರು:...

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ!

‘ಬಿಗ್​ಬಾಸ್​ ಕನ್ನಡ 12’ ನಡೆಯುತ್ತಿರುವ ಜಾಲಿವುಡ್​ ಸ್ಟುಡಿಯೋಸ್​ʼಗೆ ಬೀಗ! ಕನ್ನಡದ ಪ್ರಸಿದ್ಧ ರಿಯಾಲಿಟಿ...

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...