ಮೂರನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಲ್ಲೊಂದಾದ ಮೊಬೈಲ್ ಫೋನ್ ಮಾರಾಟದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಸಿಂಗಾಪುರ ಮೂಲದ ಕನಲಿನ್ ಸಂಸ್ಥೆಯೊಂದು ಭಾರತದಲ್ಲಿ ನಡೆಸಿದ ವರದಿಯೊಂದರ ಆಧಾರದ ಮೇಲೆ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಮೊಬೈಲ್ ಫೋನ್ ಕಂಪನಿಗಳ ಕುರಿತು ಮಾಹಿತಿ ನೀಡಿದೆ. ಭಾರತದಲ್ಲಿ ಸ್ಮಾರ್ಟ್‍ಫೋನ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಶೇ.20ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ಈ ಸಂಸ್ಥೆ ಮಾಹಿತಿ ನೀಡಿದೆ. ಇದರ ಮಾಹಿತಿಯ ಪ್ರಕಾರವಾಗಿ ಭಾರತದಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿರುವ ಮೊಬೈಲ್‍ಗಳಲ್ಲಿ ಸ್ಯಾಂಮ್ಸಂಗ್ ನಂ.1 ಸ್ಥಾನ ಅಲಂಕರಿಸಿಕೊಂಡಿದ್ದು, ಒಟ್ಟು ಭಾರತದಲ್ಲಿ ಸುಮಾರು 3 ಕೋಟಿ ಸ್ಯಾಮ್‍ಸಂಗ್ ಮೊಬೈಲ್ ಮಾರಾಟವಾಗಿದೆ. ಇನ್ನು ಕಳೆದೊಂದು ವರ್ಷಗಳಿಂದ 2ನೇ ಸ್ಥಾನದಲ್ಲಿದ್ದ ಮೈಕ್ರೋಮ್ಯಾಕ್ಸ್ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇನ್ನು ಈ ಸ್ಥಾನವನ್ನು ಚೀನಾದ ಲೆನೆವೋ ಕಂಪನಿ ಪಡೆದುಕೊಂಡಿದೆ ಎಂದು ಹೇಳಿದೆ. ಭಾರತದಲ್ಲಿ ಇದೀಗ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ ಕಂಪನಿಗಳ ಫೋನ್ ಮಾರಾಟ ಗಣನೀಯ ಪ್ರಮಾನದಲ್ಲಿ ಇಳಿಕೆ ಕಂಡಿದ್ದು ನಾಲ್ಕರ ಘಟ್ಟದಲ್ಲಿ ಚೀನಾದ ಮತ್ತೊಂದು ಕಂಪನಿ ಕ್ಸಿಯೋಮಿ ಇದೆ. ವಿಶೇಷ ಅಂದ್ರೆ ಭಾರತದಲ್ಲಿ ಹೆಚ್ಚಾಗಿ ಎಲ್‍ಟಿಇ ಫೋನ್‍ಗಳು ಈಗ ಹೆಚ್ಚು ಮಾರಾಟವಾಗುತ್ತಿದೆ ಎಂದು ತಿಳಿದು ಬಂದಿದೆ.
Like us on Facebook The New India Times
POPULAR STORIES :
ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?